ಹರಿಹರ, ಮಾ.29- ಬರುವ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸುವುದಕ್ಕೆ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಭಾವನಾ ಬಸವರಾಜ್ ಮತ್ತು ತಹಶೀಲ್ದಾರ್ ಗುರುಬಸವರಾಜ್ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿ ಚುನಾವಣೆ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ನಾರನಗೌಡ, ಬಿಇಓ ಹನುಮಂತಪ್ಪ, ಆರೋಗ್ಯ ಇಲಾಖೆಯ ಪ್ರಶಾಂತ್, ಬೆಸ್ಕಾಂ ಇಲಾಖೆಯ ರಮೇಶ್ ನಾಯ್ಕ್, ಸಿಡಿಪಿಓ ಇಲಾಖೆಯ ಪೂರ್ಣಿಮಾ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.