ದಾವಣಗೆರೆ, ಮಾ.24- ಸಾಂಪ್ರದಾಯಿಕವಾಗಿ ಕಾಮದಹನ ಮಾಡುವ ಮೂಲಕ ಹೋಳಿ ಆಚರಣೆಗೆ ನಗರದ ಚೌಕಿಪೇಟೆಯ ಅಕ್ಕಿ ವರ್ತಕರು ಚಾಲನೆ ನೀಡಿದರು.
ಹೋಳಿ ಹುಣ್ಣಿಮೆ ಪ್ರಯುಕ್ತ ನಾಳೆ ನಡೆಯುವ ರಂಗೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಕಾಮದಹನ ಮಾಡಲಾಯಿತು
ಈ ಸಂದರ್ಭದಲ್ಲಿ ಅಕ್ಕಿ ವರ್ತಕರಾದ ಎಂ.ವಿ.ಜಯಪ್ರಕಾಶ್ ಮಾಗಿ, ಬಿ.ಪಿ.ಎಂ.ಜಗದೀಶ್, ಹಲವಾಗಲ ರುದ್ರೇಶ್, ಜಯರಾಜ್ ಮೇಟಿ, ಟಿ.ಎಸ್.ಮಲ್ಲಿಕಾರ್ಜುನ್, ಸತೀಶ್ ಹುಬ್ಬಳ್ಳಿ, ಪರಶುರಾಮ್ ಪಿ.ಎಸ್, ಎ.ಬಿ.ಬಸವರಾಜ್, ಶಾಸ್ತ್ರೀ ಬಸವರಾಜ್, ವಿನಾಯಕ ಬ್ಯಾಡಗಿ, ಮಾಳಗಿ ಸಿದ್ದು, ವಿಶ್ವನಾಥ ಬಾದಾಮಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಟಿಂಕರ್ ಮಂಜಣ್ಣ, ಜಿ.ಬಿ. ಉಮೇಶ್, ಎಂ.ವೈ. ಆನಂದ್ ಉಪಸ್ಥಿತರಿದ್ದರು.