ಮಾನವನ ಮೆದುಳು ಪ್ರಕೃತಿಯ ಸೂಪರ್ ಕಂಪ್ಯೂಟರ್

ಮಾನವನ ಮೆದುಳು ಪ್ರಕೃತಿಯ ಸೂಪರ್ ಕಂಪ್ಯೂಟರ್

ದಾವಣಗೆರೆ ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಅಂಗ ರಚನಾ ಶಾಸ್ತ್ರದ ಉಪನ್ಯಾಸಕ ಸುಮನ್ ಎನ್.ಎಸ್.  ವಿಶ್ಲೇಷಣೆ

ದಾವಣಗೆರೆ, ಮಾ.24 – ಮಾನವನ ಮೆದುಳು ಅವನ ಇಡೀ ಶರೀರದ ಸಾರ್ವಭೌಮ, ಮಿದುಳಿಲ್ಲದೇ ಮನುಷ್ಯನಿಲ್ಲ. ಮನುಷ್ಯನ ಸರ್ವ ಅಸ್ತಿತ್ವಕ್ಕೆ ಕಾರಣ ಮಿದುಳು. ಆದ್ದರಿಂದ ಮಾನವನ ಮಿದುಳು ಒಂದು ಪ್ರಕೃತಿಯ ಸೂಪರ್ ಕಂಪ್ಯೂಟರ್ ಇದ್ದಂತೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಅಂಗ ರಚನಾ ಶಾಸ್ತ್ರದ ಉಪನ್ಯಾಸಕ ಸುಮನ್ ಎನ್.ಎಸ್. ಅಭಿಪ್ರಾಯಪಟ್ಟರು.

ನಗರದ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಕಳೆದ ವಾರ ಆಯೋಜಿಸಲಾಗಿದ್ದ `ನಮ್ಮ ದೇಹದ ವಿಜ್ಞಾನ-ಮಾನವನ ಅಂಗರಚನಾ ಶಾಸ್ತ್ರ’ ಎಂಬ ವಿಶೇಷ ಉಚಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

ನಮ್ಮ ಭೂಮಿಯ ಮೇಲೆ ಏಳು ಮಹಾನ್ ಅದ್ಭುತಗಳಿವೆ. ಆ ಏಳು ಅದ್ಭುತಗಳನ್ನು ನಿರ್ಮಿಸಿರುವಂತಹ ಮಾನವನ ಮಿದುಳು ನಮ್ಮ ಭೂಮಿಯ ಮೇಲಿರುವ 87 ಲಕ್ಷ ಜೀವರಾಶಿಗಳಲ್ಲಿ ಮಾನವನ ಮಿದುಳನ್ನು ಮೀರಿಸುವಂತಹ ಮತ್ತೊಂದು ಮಿದುಳು ಯಾವ ಜೀವಿಗೂ ಇಲ್ಲ. ಸೂಪರ್ ಕಂಪ್ಯೂಟರನ್ನು ನಿರ್ಮಿಸಿದ ಮಾನವನ ಮಿದುಳೇ ಹೋಲಿಕೆ ಇಲ್ಲದ ಸೂಪರ್ ಕಂಪ್ಯೂಟರ್ ಆಗಿದೆ. 

ಮನುಷ್ಯನ ಮೆದುಳಿನಲ್ಲಿ ಮೂರು ಶತಕೋಟಿ ಜೀವಕೋಶಗಳಿವೆ. ಒಂದು ನರಕೋಶವು ಸುಮಾರು 10 ಸಾವಿರ ನರಕೋಶಗಳೊಡನೆ ಸಂಪರ್ಕವನ್ನು ಸಾಧಿಸಬಹುದು. 

ಇಷ್ಟು ನರಕೋಶಗಳ ಕಾರ್ಯ ಸಾಮರ್ಥ್ಯವನ್ನು ಕಂಪ್ಯೂಟರ್ ಪರಿಭಾಷೆಯಲ್ಲಿ ಹೇಳುವುದಾದರೆ ಒಂದು ಟ್ರಿಲಿಯನ್ ಬೀಟ್ ಪರ್ ಸೆಕೆಂಡ್, ಮೆದಳಿನ ಸ್ಮರಣ ಪ್ರಮಾಣವು ಸುಮಾರು ಒಂದು ಸಾವಿರ ಟೆರಾಬೈಟ್‍ಗಳಿಗಿಂತಲೂ ಹೆಚ್ಚು, ಮನುಷ್ಯನ ಮೆದುಳಿನ ತೂಕ ಸುಮಾರು 1,300 ಗ್ರಾಂ.ನಷ್ಟು ಗಾತ್ರ ಇದ್ದು, ಇದು ಪ್ರಕೃತಿಯ ಸರ್ವಶ್ರೇಷ್ಠ ಸೃಷ್ಠಿಯಾಗಿದೆ. ಮನುಷ್ಯನ ಮೆದುಳು ಅವನು ಹುಟ್ಟುವ ಮೊದಲೇ ಜಾಗೃತವಾಗಿ ಸಾಯುವ ಕೊನೆಯ ಕ್ಷಣದ ವರೆಗೂ ನಿರಂತರ ಕೆಲಸ ಮಾಡುತ್ತಿರುತ್ತದೆ. ಮೆದುಳಿಗೆ ನಿದ್ರೆ-ವಿಶ್ರಾಂತಿ ಎನ್ನುವುದೇ ಇಲ್ಲ ಎಂದು ಮಾನವನ ದೇಹದ ಮೂಳೆ, ಮಾಂಸಖಂಡಗಳು ಮತ್ತು ಗ್ರಂಥೀಯ ಮುಖ್ಯವಾದ ಕೆಲಸ ಕಾರ್ಯಗಳ ಬಗ್ಗೆ ಪ್ರತಿಯೊಂದು ಅಂಗಾಂಗಳ ಕಾರ್ಯಕ್ಷಮತೆಯನ್ನು ವಿವರವಾಗಿ ಉದಾಹರಣೆಗಳ ಮೂಲಕ ತಿಳಿಸಿದರು. ಯೋಗಾಸನಗಳನ್ನು ಮಾಡುವಾಗ ನಮ್ಮ ಶರೀರದಲ್ಲಿ ಉಂಟಾಗುವ ರಸಾಯನಿಕ ಕ್ರಿಯೆಗಳು ಹೇಗೆ ನಡೆಯುತ್ತವೆ. ಅದರ ಪರಿಣಾಮಗಳನ್ನು ಹೇಗೆ ಗಮನಿಸಬಹುದು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.

ಪ್ರತಿಷ್ಠಾನದ ಸಂಸ್ಥಾಪಕ ಯೋಗ ಗುರು ರಾಘವೇಂದ್ರ ಗುರೂಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ಹರಿಹರದ ಅಂಚೆ ಇಲಾಖೆಯ ಶ್ರೀಮತಿ ವೇದಾವತಿ ಡಿ.ಎಂ.ಎಸ್. ಮತ್ತು ಶ್ರೀಮತಿ ರೇಖಾ ಕಲ್ಲೇಶ್, ಶ್ರೀಮತಿ ಗೌರಮ್ಮ, ಸಗಟು ಔಷಧಿ ವ್ಯಾಪಾರಿ ಸಂದೀಪ್ ಒಡೋಣಿ, ಸಾಫ್ಟವೇರ್ ಉದ್ಯೋಗಿ ಭರತ್ ಒಡೋನಿ, ಯೋಗ ಸಾಧಕಿ ಅಶ್ವಿನಿ ಒಡೋನಿ, ಮೀಸಲು ಆರಕ್ಷಕ ಚಂದ್ರ, ಮಾಸ್ಟರ್ ಧನುಷ್, ಪ್ರಶಾಂತ್, ಯೋಗಸಾಧಕ ಮಹಂತೇಶ್, ವರುಣ್, ಅಬಕಾರಿ ಇಲಾಖೆಯ ಗೋವಿಂದರಾಜು, ಯೋಗ ಶಿಕ್ಷಕ ಪ್ರಭುಸ್ವಾಮಿ ಇನ್ನಿತರರು ಭಾಗವಹಿಸಿದ್ದರು.

error: Content is protected !!