ಜಗಳೂರು, ಮಾ.21- ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ಜಗಳೂರು ತಾಲ್ಲೂಕಿನ ಕಾನನಕಟ್ಟೆ, ಮುಸ್ಟೂರು, ಬಿದರಿಕೆರೆ ಚೆಕ್ ಪೋಸ್ಟ್ಗಳನ್ನು ಇಂದು ಪರಿಶೀಲಿಸಿದರು. ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡಬೇಕು ತಪಾಸಣೆ ಮಾಡದೇ ವಾಹನ ಹೋಗಲು ಬಿಟ್ಟಲ್ಲಿ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವರದಿಯಾದಲ್ಲಿ ಸಂಬಂಧಿಸಿದ ಚೆಕ್ ಪೋಸ್ಟ್ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಈ ವೇಳೆ ಸಹಾಯಕ ಚುನಾವಣಾಧಾಕಾರಿ ಸಿದ್ದರಾಮ್ ಮರಿಹಾಳ್ ಉಪಸ್ಥಿತರಿದ್ದರು.
January 10, 2025