ಹರಿಹರ, ಮಾ.21- ತಾಲ್ಲೂಕಿನ ಕೆ ಬೇವಿನಹಳ್ಳಿ ಗ್ರಾಮದ ವಿಶಾಲಾಕ್ಷಿ ಅವರಿಗೆ ದಾವಣಗೆರೆ ವಿವಿಯಲ್ಲಿ ಈಚೆಗೆ ಜರುಗಿದ 11ನೇ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪ್ರದಾನ ಮಾಡಿದೆ. ದಾವಣಗೆರೆಯ ಬಿಐಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾದ ವಿಶಾಲಾಕ್ಷಿ, ಪ್ರೊ. ಡಿ.ಯು.ಎಸ್ ಮಹಾಬಲೇಶ್ವರ ಮಾರ್ಗದರ್ಶನದಲ್ಲಿ ದ್ರವ್ಯಚಲನ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಂಶೋಧನ ಮಹಾಪ್ರಬಂಧ ಮಂಡಿಸಿದ್ದರು. ವಿಶಾಲಾಕ್ಷಿ, ಅಂಗಡಿ ಬಸೆಟ್ಟೆಪ್ಪ ಅವರ ಪುತ್ರಿ.
January 11, 2025