ದಾವಣಗೆರೆ, ಮಾ.20- ಇಲ್ಲಿನ ವಿನಾಯಕ ಬಡಾವಣೆ ವಿದ್ಯಾನಗರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ವಿನೂತನ ಸೂಪರ್ ಜೋಡಿ ಕಾರ್ಯಕ್ರಮ ನಡೆಯಿತು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಸ್ಟಿನ್ ಡಿಸೋಜಾ ಅವರು, ಬಾಲ್ಯಾವಸ್ಥೆಯಲ್ಲೇ ಮಕ್ಕಳ ತಪ್ಪುಗಳನ್ನು ತಿದ್ದಬೇಕು ಮತ್ತು ತಂದೆ-ತಾಯಿಯರು ಮಕ್ಕಳೊಡನೆ ಪ್ರೀತಿಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
50 ವರ್ಷ ಮೇಲ್ಪಟ್ಟವರು: ಲೀಲಾ ಶೇಖರ್ , ಶೈಲಾ ಪಾಲಾಕ್ಷ (ಪ್ರಥಮ), ಲತಾ ಸತೀಶ್, ಪುಷ್ಪಾ ಬಸವರಾಜು (ದ್ವಿತೀಯ), ಶೋಭಾ ಜಯಣ್ಣ, ನೇತ್ರಾವತಿ ಮಂಜುನಾಥ್ (ತೃತೀಯ) ಬಹುಮಾನ ಗಳಿಸಿದ್ದಾರೆ.
50 ವರ್ಷದ ಒಳಗಿನವರು: ವೀಣಾ ಕೃಪಾ, ತನುಜಾ ರುದ್ರಸ್ವಾಮಿ (ಪ್ರಥಮ), ಮಂಜುಳಾ ನಾಗರಾಜ್, ವೀಣಾ ಮಹಾಂತೇಶ್ (ದ್ವಿತೀಯ), ಸಹನಾ, ಕವಿತಾ ಕೇಶವಮೂತಿ೯ (ತೃತೀಯ) ಬಹುಮಾನ ಪಡೆದಿದ್ದಾರೆ.
ದೇವಿಕಾ ವಿಜಯ್ ಕುಮಾರ್ ಬಹುಮಾನ ವಿತರಿಸಿದರು.
ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ, ಜಯ ವೇಣುಗೋಪಾಲ, ರಂಜಿತಾ ಕುಮಾರ್, ವಾಣಿರಾಜ್, ವಿನೋದ ಶಿವಕುಮಾರ್, ಶಶಿ ಶಿವಯ್ಯ, ಶೈಲಜಾ ತಿಮ್ಮೇಶ್, ರೂಪಾ ಶಂಕರ್ ಮೂತಿ೯, ಕಲ್ಪನಾ ವಿನಾಯಕ, ಚೇತನಾ ಮಂಜುನಾಥ್ ಇತರರು ಇದ್ದರು.