ಹರಿಹರ ತಾ.ಪಂ. ಪ್ರಭಾರಿ ಇ.ಒ ಆಗಿ ಬಸವರಾಜ್ ಅಧಿಕಾರ ಸ್ವೀಕಾರ

ಹರಿಹರ ತಾ.ಪಂ. ಪ್ರಭಾರಿ ಇ.ಒ ಆಗಿ ಬಸವರಾಜ್ ಅಧಿಕಾರ ಸ್ವೀಕಾರ

ಹರಿಹರ, ಮಾ.19 –  ನಗರದ ತಾ.ಪಂ. ನ ಇಓ ರಮೇಶ್ ಸುಲ್ಪಿ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರಕ್ಕೆ ವರ್ಗಾವಣೆಯಾಗಿದ್ದು, ತೆರವಾದ  ಸ್ಥಾನಕ್ಕೆ  ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಹೆಚ್. ಬಸವರಾಜ್‌ ಅವರು  ಹರಿಹರ ತಾ.ಪಂ.ನ ಕಾರ್ಯನಿರ್ವಾಹಕ ಪ್ರಭಾರಿ ಅಧಿಕಾರಿಯಾಗಿ ನಿನ್ನೆ ಅಧಿಕಾರ ವಹಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ತಾ.ಪಂ. ಲೆಕ್ಕಾಧಿಕಾರಿ ಲಿಂಗರಾಜ್, ಪೂಜಾ, ಕಿರಣ್ ಕುಮಾರ್ ಇತರರು ಹಾಜರಿದ್ದರು.

error: Content is protected !!