ಮಲೇಬೆನ್ನೂರು, ಮಾ.19- ನಂದಿಗುಡಿ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವವು ಮಂಗಳವಾರ ಮಧ್ಯಾಹ್ನ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿತು. ಇದಕ್ಕೂ ಮುನ್ನ ರುದ್ರ ಗುಗ್ಗಳ ಹಾಗೂ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವವೂ ಸಂಭ್ರಮದಿಂದ ನಡೆಯಿತು. ವಿವಿಧ ಕಲಾಮೇಳಗಳು ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮೆರಗು ತಂದವು.
ನಂದಿಗುಡಿ, ಉಕ್ಕಡಗಾತ್ರಿ, ಗೋವಿನಹಾಳ್, ವಾಸನ, ಕೆ.ಎನ್.ಹಳ್ಳಿ, ಹಿಂಡಸಘಟ್ಟ, ಕೋಣನತಲೆ, ಮೂಗಿನಗೊಂದಿ, ಕೊಕ್ಕನೂರು, ಹಳ್ಳಿಹಾಳ್, ಜಿ.ಬೇವಿನಹಳ್ಳಿ, ಬಸಾಪುರ, ಜಿಗಳಿ ಸೇರಿದಂತೆ ಮತ್ತಿತರೆ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಸಂಜೆ ದೊಡ್ಡಬಂಡಿ ಪ್ರದರ್ಶನದ ನಂತರ ಓಕುಳಿ ಹಾಗೂ ಕಂಕಣ ವಿಸರ್ಜನೆ ಕಾರ್ಯಕ್ರಮಗಳು ನಡೆದವು. ಬುಧವಾರ ಬೆಳಗ್ಗೆ 9ಕ್ಕೆ ಶ್ರೀ ಬಸವೇಶ್ವರ ಪಾಲಿಕೆ ಉತ್ಸವದೊಂದಿಗೆ ಬುಕ್ಕಿಟ್ಟಿನ ಸೇವೆ ನಡೆಯಲಿದೆ.