ವಚನಾಮೃತ ಬಳಗದಲ್ಲಿ ಮಹಿಳಾ ದಿನಾಚರಣೆ

ವಚನಾಮೃತ ಬಳಗದಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.18- ವಚನಾಮೃತ ಬಳಗದ ವತಿಯಿಂದ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. 

ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಿರಿಧಾನ್ಯದಿಂದ ಖಾದ್ಯ ತಯಾರಿಸುವ ಸ್ಪರ್ಧೆ, ಸೀರೆಯಲ್ಲಿ ವಿವಿಧ ರೀತಿಯ ಉಡುಗೆ ಸ್ಪರ್ಧೆ ಸೇರಿದಂತೆ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸಿರಿಧಾನ್ಯ ಖಾದ್ಯ ಸ್ಪರ್ಧೆ: ಈ ಸ್ಪರ್ಧೆಯಲ್ಲಿ  ಕೇಕ್, ಪೊಂಗಲ್, ಮೊಸರನ್ನ, ಹಲ್ವಾ, ಪಲ್ಯ, ಪಲಾವ್, ಉಂಡೆ, ಪಾಯಸ, ಇಡ್ಲಿ, ರೊಟ್ಟಿ, ಪಾನಕ, ಮಜ್ಜಿಗೆ ಮುಂತಾದ ವಿವಿಧ ಆಹಾರಗಳನ್ನು ತಯಾರಿಸಿದ್ದರು.

ಸೀರೆಯ ವಿವಿಧ ಉಡುಗೆ: ಭಾರತೀಯ ಸಂಸ್ಕೃತಿಯಂತೆ ಆಕರ್ಷಕವಾಗಿ ಸೀರೆ ಧರಿಸಿ ಎಲ್ಲರ ಗಮನ ಸೆಳೆದರು.

 ಆಶುಭಾಷಣ ಸ್ಪರ್ಧೆ: ದೈನಂದಿನ ಜೀವನದಲ್ಲಿ ಉಪಯೋಗಿಸುವ ವಸ್ತುಗಳ ಕುರಿತು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸದಸ್ಯರೆಲ್ಲರೂ ಭಾಗವಹಿಸಿದ್ದರು.

ಶಿಲ್ಪಾ, ತನುಜಾ, ಸರೋಜ, ಸುಮಾ ಬೇತೂರ್, ಸಂಗೀತ ಈ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಆಯೋಜಕಿ ಸೌಮ್ಯ ಸತೀಶ್, ದೇವಿಕಾ, ಸರಸ್ವತಿ, ಸುಮಾ ಬೇತೂರ್, ತೀರ್ಪುಗಾರರಾಗಿ ಪ್ರೇಮಾ ಬಾಲರಾಜ್, ಕವಿತಾ ಕೊಟ್ರಬಸಪ್ಪ, ಮಮತಾ ನಾಗರಾಜ್, ಮದುಮತಿ ಗಿರೀಶ್, ವೀಣಾ, ಶಾಂತಾ ಶಿವಶಂಕರ್ , ಜ್ಯೋತಿ ,ನಾಗರತ್ನ, , ರಾಧಾ, ಕವಿತಾ, ರೇಖಾ, ಸುಮಾ ನಾಗರಾಜ್, ಲತಾ, ರಾಜಶ್ರೀ, ಗಿರಿಜಾ ಬಿಲ್ಲಳ್ಳಿ, ಸುಜಾತ, ರೂಪಾ, ಕಲ್ಪನಾ, ರತ್ನ, ಕಾತ್ಯಾಯಿನಿ ಇತರರಿದ್ದರು.

error: Content is protected !!