ದಾವಣಗೆರೆ, ಮಾ. 18- ಸಮೀಪದ ಗೋಣಿವಾಡದ ಸೋಮೇಶ್ವರ ಸಂಸ್ಥೆಯ ಬಳಿ ಬಿಸಿಲಿನ ಬೇಗೆಯಿಂದ ಬಳಲಿ ರಸ್ತೆ ಬದಿ ನಿಸ್ತೇಜರಾಗಿದ್ದ ಮಹಿಳೆಗೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಸಂಜೀವಿನಿಯಾಗಿದ್ದಾರೆ. ಕಾರ್ಯ ನಿಮಿತ್ತ ಡಾ. ರವಿಕುಮಾರ್ ಅವರು ಚನ್ನಗಿರಿಗೆ ತೆರಳವಾಗ ರಸ್ತೆ ಬದಿ ಮಹಿಳೆಯೊಬ್ಬರು ಬೈಕ್ ನಿಲ್ಲಿಸಿ ಕುಳಿತಿದ್ದನ್ನು ಗಮನಿಸಿ, ಕೂಡಲೇ ವಾಹನ ನಿಲ್ಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ತಲುಪಿಸಿ ಆರೋಗ್ಯ ದಾಸೋಹ ತತ್ವ ಸಾರಿದ್ದಾರೆ.
January 10, 2025