ಶಿವಮೊಗ್ಗ, ಮಾ. 17- ಶಿವಮೊಗ್ಗದ ಎನ್‍ಯು ಆಸ್ಪತ್ರೆಯು 10 ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ಪ್ರವೀಣ್ ಮಾಳವದೆ (ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಅಂಡ್ ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್) ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ (ಎಬಿಒ ಇನ್‍ಕಂಪ್ಯಾಟಿಬಲ್) ವ್ಯಕ್ತಿಗಳಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಲು ಸಜ್ಜಾಗಿದೆ ಎಂದು ಡಾ. ಪ್ರವೀಣ್ ಮಾಳವದೆ ತಿಳಿಸಿದರು.
ಎನ್‍ಯು ಆಸ್ಪತ್ರೆಯ ಯುರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಪ್ರದೀಪ್ ಎಮ್. ಜಿ. ಮಾತನಾಡಿ, ಚಿಕ್ಕ ಮಗುವಿನಿಂದ ಹಿಡಿದು ವೃದ್ಧರವರೆಗೂ ಕಿಡ್ನಿ ಹಾಗೂ ಮೂತ್ರ ರೋಗಗಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ. ಹಾಗಾಗಿ ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ತಡೆಗಟ್ಟುವಿಕೆ ಹೇಗೆ ಎಂದು ತಿಳಿಸುವುದು ಮುಖ್ಯವಾಗಿದೆ ಎಂದು ಹೇಳಿದರು.