ಕುಂಬಾರ ಅಭಿವೃದ್ಧಿ ಮಂಡಳಿ ಉನ್ನತಿಗೆ ಯೋಜನೆ ರೂಪಿಸಲು ಒತ್ತಾಯ

ಕುಂಬಾರ ಅಭಿವೃದ್ಧಿ ಮಂಡಳಿ ಉನ್ನತಿಗೆ ಯೋಜನೆ ರೂಪಿಸಲು ಒತ್ತಾಯ

ಹರಿಹರದಲ್ಲಿನ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಡಾ. ರವಿ ಕುಂಬಾರ್

ಹರಿಹರ, ಮಾ. 17-  ಕುಂಬಾರ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರು ಮತ್ತು ಅನುದಾನ ನೀಡುವ ಮೂಲಕ ಸಮುದಾಯದ ಉನ್ನತಿಗೆ ಕಾರ್ಯಕ್ರಮ ರೂಪಿಸಬೇಕೆಂದು ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಡಾ. ರವಿ ಕುಂಬಾರ್ ಹೇಳಿದರು.

ತಾಲ್ಲೂಕು ಆಡಳಿತ ಮತ್ತು ಕುಂಬಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ಕುಂಬಾರ ಓಣಿ ಹತ್ತಿರ ಬಸವೇಶ್ವರ ಮಂದಿರದಲ್ಲಿ ನಡೆದ ಕವಿ ಸರ್ವಜ್ಞ ಜಯಂತಿಯಲ್ಲಿ ಅವರು ಮಾತನಾಡಿದರು.

ಕಳೆದ ಒಂದು ವರ್ಷದ ಹಿಂದೆ ಸ್ಥಾಪಿಸಲಾದ ಕುಂಬಾರ ಅಭಿವೃದ್ಧಿ ಮಂಡಳಿ ಇನ್ನೂ ಕಾರ್ಯಾಚರಣೆ ಮಾಡದೇ ಜನಾಂ  ಗಕ್ಕೆ ತೊಂದರೆಯಾಗಿದೆ. ಅನುದಾನದ ಜತೆಗೆ ಅಧ್ಯಕ್ಷರನ್ನು ನೇಮಿಸಬೇಕೆಂದರು.

ಸರ್ವಜ್ಞರ ತತ್ವ ಮತ್ತು ಆದರ್ಶಗಳನ್ನು ಜನತೆ ರೂಢಿಸಿಕೊಂಡು ಮುನ್ನಡೆ ಸಾಧಿಸಬೇಕಿದ್ದು, ಕಾರ್ಯಕ್ರಮದ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. 2ಎ ನಲ್ಲಿ ಒಳ ಮೀಸಲಾತಿ ಕಲ್ಪಿಸುವ ಮೂಲಕ ಪ್ರತ್ಯೇಕ ಕ್ಯಾಟಗರಿ ಮಾಡಬೇಕಿದ್ದು, ತಾಲ್ಲೂಕಿಗೊಂದು ಸರ್ವಜ್ಞ ಭವನ ನಿರ್ಮಾಣ ಆಗಬೇಕು. ಕಲ್ಲಂದೂರಿನಲ್ಲಿ ಮಣ್ಣಿನ ಉತ್ಪನ್ನಗಳನ್ನು ತಯಾರಿ ಮಾಡುವ ಕಲಾ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಉಚಿತ ವಸತಿ ಸಹಿತ ಸೈಫಂಡ್ ಜತೆಗೆ ತರಬೇತಿ ನೀಡಲಾಗುತ್ತದೆ ಎಂದರು. 

ತಯಾರಿಸಲಾದ ಮಡಿಕೆ, ಕುಡಿಕೆ ಮತ್ತು ಕಲಾಕೃತಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸ ಲಾಗುವುದು. ಈ ಸಂಬಂಧ ಕಲಿಕೆಯಲ್ಲಿ ಆಸಕ್ತಿ ಇರುವ ಯುವಶಕ್ತಿಗೆ ಶೀಘ್ರದಲ್ಲೇ ಕಾರ್ಯಾಗಾರ ನಡೆಸುವ ಮೂಲಕ ಸ್ವಯಂ ಉದ್ಯೋಗ ಸಾಧಿಸಲು ಅಗತ್ಯ ನೆರವು ನೀಡಲಾಗುವುದೆಂದು ಡಾ. ರವಿ ಕುಂಬಾರ್ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯ ಆಹಾರ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಂ. ಪರಮೇಶ್ ಸಹ ಸರ್ವಜ್ಞನ ತತ್ವಗಳ ಆಧಾರಿತವಾಗಿ ಕೆಲವೊಂದು ವಚನಗಳನ್ನು ಹೇಳಿದರು. ನಿವೃತ್ತ ಪ್ರಾಚಾರ್ಯ ಕೆ. ಸಿದ್ದಪ್ಪ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ಅವರು ಸರ್ವಜ್ಞನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು.

ಹರಿಹರ ತಾಲ್ಲೂಕು  ಕುಂಬಾರ ಯುವ ಸೈನ್ಯದ ಅಧ್ಯಕ್ಷ ಚಂದ್ರಶೇಖರ್ ಕುಂಬಾರ್ ಅವರು, ತ್ರಿಪದಿ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸರ್ವಜ್ಞನ ಕುರಿತು ಮಾತನಾಡಿದರು.

ಜಿಲ್ಲಾಧ್ಯಕ್ಷ  ಪುಷ್ಪರಾಜ್, ಹರಿಹರ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ಭರಮಪುರ ಗಣೇಶ್, ಮಲ್ಲಿಕಾರ್ಜುನ್ ಬಾಬು, ಈರಪ್ಪ ಕುಂಬಾರ್, ಸಂದಿ ಮನೆ ಮಲ್ಲಿಕಾರ್ಜುನ್, ಹಾಲೇಶಪ್ಪ, ಮುರುಗೇಶ್, ಕರಿಬಸಪ್ಪ, ತಿಪ್ಪೇಸ್ವಾಮಿ, ನಿಟ್ಟೂರ್ ಕಾಂತರಾಜ್, ಭೀಮ್ ನಗರ ರಾಜಣ್ಣ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

error: Content is protected !!