ಶಿಕ್ಷಣದ ಜೊತೆಗೆ ಆರೋಗ್ಯವೂ ಮುಖ್ಯ

ಶಿಕ್ಷಣದ ಜೊತೆಗೆ ಆರೋಗ್ಯವೂ ಮುಖ್ಯ

ದಾವಣಗೆರೆ, ಮಾ.17- ನಗರದ ಆರ್.ಜಿ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಎನ್.ಎಸ್.ಎಸ್ ಘಟಕ-1, ವಾಸನ್ ಕಣ್ಣಿನ ಆಸ್ಪತ್ರೆ, ಡಾ. ಜಯೇಶ್ ದಂತ ವೈದ್ಯರು, ಚರ್ಮ ರೋಗ ತಜ್ಞ ಡಾ. ಭಕ್ತವತ್ಸಲ ಅವರುಗಳ ಸಹಯೋಗದಲ್ಲಿ ದಂತ, ಚರ್ಮ, ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆರ್.ಜಿ. ಕಾಲೇಜಿನಲ್ಲಿ ಇಂದು ನಡೆಸಲಾಯಿತು. 

ಕಾರ್ಯಕ್ರಮದಲ್ಲಿ ತಜ್ಞರು ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಉದ್ದೇಶಿಸಿ ಆರೋಗ್ಯದ ಕುರಿತಾಗಿ ವಹಿಸಬೇಕಾದ ಪ್ರಾಥಮಿಕ‌ ಕಾಳಜಿಯ ಕುರಿತು ಮಾತನಾಡಿದರು. 

ಆರ್.ಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ‌ ನಿರ್ದೇಶಕ ಪಿ.ಎಸ್. ಶಿವಪ್ರಕಾಶ್‌ ಅವರು ಮಾತನಾಡಿ, ಶಿಕ್ಷಣದ ಜೊತೆಗೆ ಆರೋಗ್ಯವೂ ಸಹ ವ್ಯಕ್ತಿಯ ಸಾಮಾಜಿಕ ಜೀವನದಲ್ಲಿ ಬಹುಮುಖ್ಯವಾಗಿದೆ ಹಾಗೂ ಸಾಮಾಜಿಕ ಕಳಕಳಿಯನ್ನೂ ಸಹ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಆರ್.ಜಿ ಸ್ನಾತಕ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗೀತಾ ಜಿ.ಕೆ, ಎಂ.ಕಾಂ.ಸ್ನಾತಕೋತ್ತರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸುನೀಲ್ ಕುಮಾರ್ ಸಿ. ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಿರೂಪಣೆಯನ್ನು ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಲ್.ಎಂ. ಶರಣಕುಮಾರ  ನೆರವೇರಿಸಿ ದರು. ಇವರೊಟ್ಟಿಗೆ ಕಾರ್ಯಕ್ರಮದ ನಿರ್ವಹಣೆಯಲ್ಲಿ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕ ವಿಷ್ಣುಸೇನಾ ಡಿ.ಎಸ್, ಧೃವ ಎಸ್.ವೈ, ಗಣೇಶ್ ಬಿ., ಚೇತನ್ ಎಸ್.ದೀಕ್ಷಿತ್, ಲೋಹಿತ್‌ ಎಂ. ಸಹಕರಿಸಿದರು.

error: Content is protected !!