ಮಲೇಬೆನ್ನೂರಿನಲ್ಲಿ ಸಂಭ್ರಮದ ರಥ

ಮಲೇಬೆನ್ನೂರಿನಲ್ಲಿ ಸಂಭ್ರಮದ ರಥ

ಮಲೇಬೆನ್ನೂರು, ಮಾ.15- ಇಲ್ಲಿನ ಬಸವೇಶ್ವರ ದೇವರ ರಥೋತ್ಸವವು ಗುರುವಾರ ಸಂಜೆ ಪಟ್ಟಣದ ಎಲ್ಲಾ ದೇವರುಗಳ ಒಡಗೂಡಿ ಹಾಗೂ ಅಪಾರ ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಬಸವೇಶ್ವರ ದೇವಸ್ಥಾನ ಮುಜ ರಾಯಿ ಇಲಾಖೆಗೆ ಒಳಪಟ್ಟಿರುವುದರಿಂದ ಉಪ ತಹಶೀ ಲ್ದಾರ್ ಆರ್. ರವಿ ಮತ್ತು ಪುರಸಭೆ ಮುಖ್ಯ ಅಧಿಕಾರಿ ಎ. ಸುರೇಶ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಗ್ರಾಮ ದೇವತೆಗಳಾದ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ, ಹಟ್ಟಿ ದುರ್ಗಾಂಬಿಕೆ ಮತ್ತು ಶ್ರೀ ಬೀರಲಿಂಗೇಶ್ವರ, ಶ್ರೀ ಜೋಡಿ ಆಂಜನೇಯ ಸ್ವಾಮಿ ದೇವರುಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.

ನಂದಿಗಾವಿ ಶ್ರೀನಿವಾಸ್ ಅಭಿಮಾನಿ ಬಳಗ ದವರು ಮತ್ತು ಪಟ್ಟಣದ ಶ್ರೀ ಕಾಲಭೈರವ ಯುವಕ ಸಂಘಧವರು ಮಜ್ಜಿಗೆ, ಪಾನಕ ವಿತರಿಸಿದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿ.ಪಂ. ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ. ವಾಗೀಶ್‌ಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ  ಬಿ. ಚಿದಾನಂದಪ್ಪ, ಮಾಜಿ ಪ್ರಧಾನರಾದ ಡಾ. ಎಂ.ಜಿ. ರಂಗನಾಥ್, ಡಾ. ಬಿ. ಚಂದ್ರಶೇಖರ್, ಪೂಜಾರ್ ಬಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಕೆ.ಜಿ. ಕೊಟ್ರೇಶಪ್ಪ, ಕೆ.ಜಿ. ಪರಮೇಶ್ವರಪ್ಪ, ಚಿಟ್ಟಕ್ಕಿ ನಾಗರಾಜ್, ಕೆ.ಪಿ. ಗಂಗಾಧರ್ ಸೇರಿದಂತೆ  ಇತರರು ಭಾಗವಹಿಸಿದ್ದರು.

ಪಿಎಸ್ಐ ಪ್ರಭು ಕೆಳಗಿನಮನಿ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 

ಕಾರಣಿಕ : ರಥೋತ್ಸವದ ಅಂಗವಾಗಿ ಜರುಗಿದ ಶ್ರೀ ಬೀರಲಿಂಗೇಶ್ವರ ಕಾರಣಿಕ ಹೀಗಿದೆ.

`ಹಸುಗೂಸು ಹಾಲು ಕುಡಿದೀತಲೆ, ಧಾನ್ಯ, ನೀರು ಸಂತುಷ್ಠಿ ಆದಿತಲೇ, ಅದಕ್ಕೆ ನಾನಾದನಿ’ ಎಂದು ಪೂಜಾರಪ್ಪ ಕಾರಣಿಕ ನುಡಿದರು.

error: Content is protected !!