ತರಾತುರಿ ಕೆಲಸ ಬೇಡ, ಗುಣಮಟ್ಟದ ಕಾಮಗಾರಿ ಮಾಡಿ

ತರಾತುರಿ ಕೆಲಸ ಬೇಡ, ಗುಣಮಟ್ಟದ ಕಾಮಗಾರಿ ಮಾಡಿ

ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್‌

ಹರಪನಹಳ್ಳಿ, ಮಾ.13 – ಗುತ್ತಿಗೆದಾರರು ತರಾತುರಿಯಲ್ಲಿ ಕೆಲಸ ಮಾಡದೆ ಗುಣಮಟ್ಟದ ಕಾಮಗಾರಿ ಮಾಡಿ ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಪಟ್ಟಣದ ಕೊಟ್ಟೂರು ವೃತ್ತದ ಬಳಿ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆ ಅಡಿಯಲ್ಲಿ ಹರಪನಹಳ್ಳಿ ಹಾಗೂ ತೆಲಗಿ, ಹಳ್ಳಿಕೇರಿ, ರಾಗಿಮಸಲವಾಡ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ
ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆ  ಹಾಗೂ ಇತರೆ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ   ನೆರವೇರಿಸಿ ಅವರು ಮಾತನಾಡಿದರು.

ಆರು ಕಾಮಗಾರಿಗಳಿಗೆ  788.50
ಲಕ್ಷ ಅನುದಾನ ತಂದಿದ್ದು, ಮಳೆಗಾಲ ಬರುವುದರೊಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ತಿಳಿಸಿದರು. 

ಇಂಜಿನಿಯರ್ ಪ್ರಕಾಶ ಪಟೇಲ್ ಮಾತನಾಡಿ, ಕಲ್ಯಾಣ ಕರ್ನಾಟಕದ ಯೋಜನೆ ಅಡಿಯಲ್ಲಿ ಹಿಂದುಳಿದ ತಾಲ್ಲೂಕಿಗೆ ಸಾಕಷ್ಟು ಅನುದಾನ ತಂದು ಶಾಸಕರು  ಅಭಿವೃದ್ಧಿಗೆ ಮುಂದಾಗಿದ್ದಾರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಉಳಿದ ಕಾಮಗಾರಿಗಳನ್ನು ಪೂರೈಸಲಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿ ನಪ್ಪ. ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಗೌಡ, ಪುರಸಭೆ ಸದಸ್ಯರುಗಳಾದ ಟಿ.ವೆಂಕಟೇಶ್, ಲಾಟಿ ದಾದಾಪೀರ್ ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಣ್ಣ, ಎಚ್.ಎಂ.ಕೊಟ್ರಯ್ಯ, ಎಚ್.ಎಂ.ಮಂಜುನಾಥ, ಸಿ.ಪಾಲಾಕ್ಷ, ಕೆ.ಅಶೋಕ, ತಿಮ್ಮಲಪುರದ ಈಶ, ಗುತ್ತಿಗೆದಾರರಾದ ಬಾಣದ  ಅಂಜಿನಪ್ಪ ಮತ್ತು ಟಿ.ಉಮಾಕಾಂತ, ನಂದಿಬೇವೂರು ಮಂಜುನಾಥ,  ಎಲ್.ಜಿ.ಚೇತನ ಸೇರಿದಂತೆ, ಇತರರು ಇದ್ದರು.

error: Content is protected !!