ಹೊನ್ನಾಳಿ, ಮಾ.12- ರಾಜ್ಯ ಸರ್ಕಾರವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ವ್ಯಾಪಾರ ವಹಿವಾಟು ಚುರುಕುಗೊಳಿಸಿ, ಸಮಿತಿಗಳಿಗೆ ಮತ್ತೆ ಜೀವಕಳೆ ತರುವ ಕಾರ್ಯ ನಡೆದಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ 1.24 ಕೋಟಿ ರೂ.ಗಳ ವೆಚ್ಚದಲ್ಲಿ ಆರ್ಐಡಿಎಫ್ ಯೋಜನೆಯಡಿ ಹರಾಜು ಕಟ್ಟೆ, ಕಾಂಕ್ರಿಟ್ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸಹಾಯಕ ಇಂಜಿನಿಯರ್ ವೆಂಕಟನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರುದ್ರೇಶ ನಾಯ್ಕ, ಆಡಳಿತಾಧಿಕಾರಿ
ಜೆ.ಪ್ರಭು, ಕಾರ್ಯದರ್ಶಿ ಮಹೇಶ್, ಗುತ್ತಿಗೆದಾರ ಮಂಜುನಾಥ್, ಎ.ಜಿ.ಪ್ರಕಾಶ್, ಶಿವಾನಂದ ವಾಲ್ಮೀಕಿ, ವಿಜಯಕುಮಾರ್, ವರ್ತಕ ಶಂಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.