ಮಲೇಬೆನ್ನೂರಿನಲ್ಲಿ ಆಂಗ್ಲ ಭಾಷೆ ನಾಮಫಲಕ ತೆರವಿಗೆ ಸೂಚನೆ

ಮಲೇಬೆನ್ನೂರಿನಲ್ಲಿ ಆಂಗ್ಲ ಭಾಷೆ ನಾಮಫಲಕ ತೆರವಿಗೆ ಸೂಚನೆ

ಮಲೇಬೆನ್ನೂರು, ಮಾ.12- ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಮಲೇಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಾ ಉದ್ಯಮದಾರರು ಮತ್ತು ವ್ಯಾಪಾರಸ್ಥರು ನಾಮಫಲಕಗಳಲ್ಲಿ ಶೇ.60 ಕನ್ನಡವನ್ನು ಕಡ್ಡಾಯ ಬಳಸುವಂತೆ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಅವರು ತಿಳುವಳಿಕೆ ಪತ್ರವನ್ನು ನೀಡಿ, ಎರಡು ದಿನದೊಳಗೆ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಲು ಸೂಚಿಸಿದರು. ಪುರಸಭೆ ಪರಿಸರ ಇಂಜಿನಿಯರ್ ಉಮೇಶ್, ಇಂಜಿನಿಯರ್ ಮಂಜುನಾಥ್, ಶಿವರಾಜ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!