ಹರಿಹರದಲ್ಲಿ ನಾಳೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ

ಹರಿಹರದಲ್ಲಿ ನಾಳೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ

ಹರಿಹರ, ಮಾ.12- ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ,  ಬಾಪೂಜಿ ಕ್ಯಾನ್ಸರ್ ಹಾಸ್ಪಿಟಲ್, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಾಡಿದ್ದು ದಿನಾಂಕ 14ರ ಗುರುವಾರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಆಯೋಜಕ ಜಿ. ಮಂಜುನಾಥ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಾವಣಗೆರೆಯಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ 2019 ರಲ್ಲಿ ಪ್ರರಂಭವಾಗಿದ್ದು, ಇಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದು, ಅದರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ, ಗುದದ್ವಾರ, ಅನ್ನನಾಳ, ಬಾಯಿ ಕುತ್ತಿಗೆ, ಗಂಟಲು ಕ್ಯಾನ್ಸರ್, ಸೇರಿದಂತೆ ಇತರೆ ಕ್ಯಾನ್ಸರ್ ರೋಗಳಿಗೆ  ಸರ್ಜರಿ, ಕೀಮೋಥೆರಫಿ, ಅತ್ಯಾಧುನಿಕ ರೆಡಿಯೇಷನ್ ಮೂಲಕ ರೋಗವನ್ನು ಗುಣಪಡಿಸುವ ವ್ಯವಸ್ಥೆ ಇರುತ್ತದೆ. ಹಾಗಾಗಿ ಹರಿಹರ ನಗರದ ಜನತೆಗೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಾಳೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಹೆಸರಾಂತ ವೈದ್ಯರ ತಂಡ ಆಗಮಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. 

ಎ.ಪಿ.ಎಲ್, ಬಿ.ಪಿ.ಎಲ್, ಯಶಸ್ವಿನಿ, ಆಯುಷ್ಮಾನ್ ಕಾರ್ಡ್ ಹಾಗೂ ಖಾಸಗಿ ಇನ್ಸೂರೆನ್ಸ್ ಕಾರ್ಡ್ ತಂದವರಿಗೆ ಉಚಿತ ಚಿಕಿತ್ಸೆ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಆಸಕ್ತರು 948069834, 9742455516 ಸಂಖ್ಯೆಗೆ ಸಂಪರ್ಕಿಸಬಹುದು. ಆಧಾರ್ ಮತ್ತು ಬಿಪಿಎಲ್ ಕಾರ್ಡ್ ತರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಂತೋಷ ಕುಮಾರ್, ಪಿ.ಆರ್.ಓ ಸತೀಶ್ ಇತರರು ಹಾಜರಿದ್ದರು.

error: Content is protected !!