ಯರವನಾಗ್ತಿಹಳ್ಳಿ ಕ್ಯಾಂಪ್ : ಇಂದಿನಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವ

ಯರವನಾಗ್ತಿಹಳ್ಳಿ ಕ್ಯಾಂಪ್ : ಇಂದಿನಿಂದ   ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವ

ಲೋಕಿಕೆರೆ ರಸ್ತೆ, ಯರವನಾಗ್ತಿಹಳ್ಳಿ ಕ್ಯಾಂಪ್‌ನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದ್ವಾದಶ (12ನೇ) ವಾರ್ಷಿಕ ಬ್ರಹ್ಮೋತ್ಸವ, ಅಷ್ಟಬಂಧನ, ಮಹಾಸಂಪ್ರೋ ಕ್ಷಣ, ಪುಷ್ಕರೋತ್ಸವ ಕಾರ್ಯಕ್ರಮವು ಇಂದಿನಿಂದ ಇದೇ 16ರ ಶನಿವಾರದವರೆಗೆ ನಡೆಯಲಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಗೋ ಪೂಜೆ, ವಿಷ್ವಕ್ಸೇನಪೂಜೆ, ಪುಣ್ಯಾಹವಾಚನೆ, ಋತ್ವಿಕ್ ವರುಣಷ ರಕ್ಷಾಧಾರಣ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಸ್ನಪನ ವಿಶೇಷ ತಿರುಮಂಜನಂ, ವಧು-ವರರನ್ನು ಮಾಡು ವುದು, ಅಕಲ್ಮಷ ಹೋಮಂ, ವಾಸ್ತು ಶುದ್ಧಿ, ನೀರಾಂಜನ ಮಂತ್ರಪುಷ್ಪಗಳು ಅರ್ಪಣೆ  ಮಾಡಲಾಗುವುದು.

ಸಂಜೆ 5ಕ್ಕೆ ವಿಷ್ವಕ್ಸೇನ ಪೂಜೆ, ಪುಣ್ಯಾಹವಾಚನೆ, ಸಂಕಲ್ಪ, ಮೇದಿನಾ ಪೂಜೆ, ಅಂಕುರಾರ್ಪಣೆ, ವಾಸ್ತುಪೂಜೆ,  ಯಾಗಮಂದಿರ ಪೂಜೆ, ಷಠ್ಕುಂಡಾಗ್ನಿ, ಪ್ರಣಯನಂ, (ಕೋಲುಗಳಿಂದ ಉಜ್ಜಿ ಅಗ್ನಿ ಸ್ಪರ್ಶ), ನಿತ್ಯ ಹೋಮಗಳು ನೀರಾಂಜನ ಮಂತ್ರ ಪುಷ್ಪಗಳು  ನಡೆಯಲಿದೆ.

ದಿನಾಂಕ 13ರ ಬುಧವಾರ ಬೆಳಿಗ್ಗೆ 9 ಗಂಟೆಗೆ ವಿಷ್ವಕ್ಸೇನ ಪೂಜೆ, ಪುಣ್ಯಾಹವಾಚನೆ, ಚತುರ್ದಶ ಕಲಸಾರಾಧನೆ, ನವಕಳಸಾರಾಧನೆ, ಪಂಚವಿಮ್ಸತಿ ಕುಂಭಾರಾಧನೆ, ಪ್ರಧಾನ ಹೋಮಗಳು, ನಿರಾಂಜನ ಮಂತ್ರಪುಷ್ಪಗಳು, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ವಿಶ್ವಕ್ಷೇಸನ ಪೂಜೆ, ಪುಣ್ಯಾಹವಾಚನೆ, ಮಹಾಶಾಂತಿ ಹೋಮ, ನೀರಾಂಜನ ಮಂತ್ರಪುಷ್ಪಗಳು ನಡೆಯಲಿವೆ.

ದಿನಾಂಕ 14ರ ಗುರುವಾರ ಬೆಳಿಗ್ಗೆ ವಿಷ್ವಕ್ಸೇನ ಪೂಜೆ, ಪುಣ್ಯಾಹವಾಚನೆ, ಮಹಾಶಾಂತಿ ಹವನ, ಸಂತಾನ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಠಿ ಹವನ, ಸ್ವಾಮಿಯವರಿಗೆ ಸ್ನಪನ, ಅಲಂ ಕರಣ, ನಿರಾಂಜನ ಮಂತ್ರಪುಷ್ಪಗಳು, ಸಂಜೆ 4 ಕ್ಕೆ ಶ್ರೀ ಭೂ ಸಮೇತ ಶ್ರೀ ವೆಂಕ ಟೇಶ್ವರ ಸ್ವಾಮಿಯವರ  ಗ್ರಾಮೋತ್ಸವ ವನ್ನು ಗ್ರಾಮದ ರಾಜ ಬೀದಿಗಳಲ್ಲಿ ತಾಳ-ಮೇಳಗಳ ಸಮೇತ ನಡೆಸಲಾಗುವುದು. ಸಂಜೆ 6 ಕ್ಕೆ ಶ್ರೀ ಭೂಸಮೇತ ಶ್ರೀ ವೆಂಕೇಟಶ್ವರಸ್ವಾಮಿಯವರ ದಿವ್ಯ ತಿರು ಕಲ್ಯಾಣ ಮಹೋತ್ಸವವನ್ನು ಸಾಮೂಹಿಕ ವಾಗಿ ದಂಪತಿಗಳು ಕುಳಿತು ಪೂಜೆ ನೆರವೇರಿಸುವರು. 

ದಿನಾಂಕ 15ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ವಿಷ್ವಕ್ಸೇನ ಪೂಜೆ, ಪುಣ್ಯಾಹ ವಾಚನೆ, ಮಹಾಶಾಂತಿ

error: Content is protected !!