ಜಿಲ್ಲಾ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ಚಿಕಿತ್ಸೆ ಬಲಪಡಿಸುವ ಅಗತ್ಯವಿದೆ

ಜಿಲ್ಲಾ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ  ಚಿಕಿತ್ಸೆ ಬಲಪಡಿಸುವ ಅಗತ್ಯವಿದೆ

ನಗರದಲ್ಲಿನ ರಾಜ್ಯ ಮಟ್ಟದ ರೋಗ ನಿರ್ವಹಣೆ ಕಾರ್ಯಾಗಾರದಲ್ಲಿ ಡಾ.ಸುರೇಶ ಹನಗವಾಡಿ ಆಶಯ

ದಾವಣಗೆರೆ,ಮಾ.10- ಕರ್ನಾಟಕ ಹಿಮೋ ಫಿಲಿಯಾ ಸೊಸೈಟಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜ.ಜ.ಮು ವೈದ್ಯಕೀಯ ಮಹಾ ವಿದ್ಯಾಲಯ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಹಿಮೋಫಿಲಿಯಾ   ರೋಗ ನಿರ್ವಹಣೆ  ಕುರಿತು ಕಾರ್ಯಾಗಾರವನ್ನು  ಆಯೋಜಿಸಲಾಗಿತ್ತು.

ರೋಗ ಲಕ್ಷಣ ಶಾಸ್ತ್ರಜ್ಞರು, ಫಿಜಿಷಿಯನ್, ಕೀಲುಮೂಳೆ ತಜ್ಞರು,  ಮಕ್ಕಳ ತಜ್ಞರು, ಭೌತಿಕ ಚಿಕಿತ್ಸಕರು, ಪ್ರಯೋಗ ಶಾಲಾ ತಂತ್ರಜ್ಞರು  ಶುಶ್ರೂಷಕರು ಮತ್ತು ಆಪ್ತ ಸಮಾಲೋಚಕರಿಗೆ ರೋಗ ಪತ್ತೆ, ಚಿಕಿತ್ಸೆ ಮತ್ತು ಪುನಶ್ಚೇತನ ಸೇವೆ ಗಳನ್ನು ಸಮರ್ಪಕವಾಗಿ ಒದಗಿಸಲು ಸಹಕಾರಿ ಯಾಗಲು ಮತ್ತು ಉತ್ಕೃಷ್ಟ ಹಿಮೋಫಿಲಿಯಾ ಚಿಕಿತ್ಸೆ ರಾಜ್ಯಾದ್ಯಂತ ವ್ಯವಸ್ಥೆಗೊಳಿಸುವ ಉದ್ದೇ ಶದಿಂದ    ಕಾರ್ಯಾಗಾರವನ್ನು  ಸಂಘಟಿಸಲಾಗಿತ್ತು.

ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ  ಪ್ರಾಧ್ಯಾಪಕರು ಮತ್ತು ನಗರದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷರೂ ಆದ 
ಡಾ. ಸುರೇಶ ಹನಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಧ್ಯ ಕರ್ನಾಟಕದ  ಜಿಲ್ಲಾ ಆಸ್ಪತ್ರೆಗಳಲ್ಲಿ  ಸಮಗ್ರ ಹಿಮೋಫಿಲಿಯಾ ಚಿಕಿತ್ಸಾ ಮಾದರಿಯನ್ನು ಬಲಪಡಿಸುವುದು ಅಗತ್ಯವಿದೆ. ಮತ್ತು ಹಿಮೋಫಿಲಿಯಾ ಪರಿಷ್ಕೃತ ಅಂಗವಿಕಲ ಕಾಯಿದೆ 2016ರಲ್ಲಿ ಸೇರ್ಪಡೆಗೊಂಡ ನಂತರ ಯುಡಿಐಡಿ   ಕಾರ್ಡ್ ವಿತರಣೆಯ ಬಗ್ಗೆ ಇರುವ ಲೋಪದೋಷಗಳನ್ನು ಸರಿಪಡಿಸುವುದು ಸೇರಿದಂತೆ, ಅಂಗವಿಕಲರಿಗೆ ಒದಗಿಸಿರುವ ಪ್ರತಿಶತ 5% ಅನುದಾನದಲ್ಲಿ ಹಿಮೋಫಿಲಿಯಾ ತಲಸ್ಸೇಮಿಯಾ ಮತ್ತು ಸಿಕಲ್ಲಸೇಲ್ ರಕ್ತ ರೋಗಗಳ ಬಗ್ಗೆ ಅರಿವು ಕಾರ್ಯಕ್ರಮಗಳು ಮತ್ತು ಪುನಶ್ಚೇತನ ಸೇವೆಗಳನ್ನು ಒದಗಿಸಲು  ಹಿಮೋಫಿಲಿಯಾ ಸೊಸೈಟಿಗೂ ಅನುದಾನವನ್ನು ನೀಡಬೇಕೆಂದು ಕೋರಿದರು. 

 ಕಾರ್ಯಕ್ರಮವನ್ನು  ಉದ್ಘಾಟಿಸಿದ  ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ   ಸುರೇಶ ಬಿ. ಇಟ್ನಾಳ್  ಮಾತನಾಡಿ,  ಹಿಮೋಫಿಲಿಯಾ ಸೊಸೈಟಿ  ಕಾರ್ಯ ಶ್ಲ್ಯಾಘನೀಯ,  ಜಿಲ್ಲೆಯ ಎಲ್ಲಾ ತಾಲ್ಲೂಕು  ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ  ನೀಡುವ ಕಾರ್ಯಕ್ರಮವನ್ನು ನೀಡುವಲ್ಲಿ ಸಂಸ್ಥೆಗೆ ಜಿಲ್ಲಾ ಆಡಳಿತ ಸಹಕಾರ ನೀಡುತ್ತದೆ, ಅಲ್ಲದೇ ರೋಗಿಗಳ ಕ್ಷೇಮಾಭಿವೃದ್ದಿಗೆ ಪೂರಕ ಯೋಜನೆಗಳನ್ನು ರೂಪಿಸಿದಲ್ಲಿ,   ಸಹಕಾರ ನೀಡುವುದಾಗಿ ಭರವಸೆ  ನೀಡಿದರು. 

ಮುಖ್ಯ ಅತಿಥಿಗಳಾಗಿ  ಜಿಲ್ಲಾ ಆರೋಗ್ಯಾಧಿಕಾರಿ  ಡಾ.ಎಸ್. ಷಣ್ಮಖಪ್ಪ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕ  ಡಾ.  ಎಂ.ಬಿ. ನಾಗೇಂದ್ರಪ್ಪ, ಹಿಮೋಫಿಲಿಯಾ ಸೊಸೈಟಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮತ್ತು  ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ   ಮುಖ್ಯಸ್ಥ    ವರದೇಂದ್ರ ಕುಲಕರ್ಣಿ ಆಗಮಿಸಿದ್ದರು. 

ರಾಜ್ಯ ರಕ್ತಕೋಶ ಅಧಿಕಾರಿ ಡಾ. ಎನ್. ಶಾಕೀಲಾ  ಅವರು ಹಿಮೋಫಿಲಿಯಾ ಮತ್ತು ರಕ್ತ ರೋಗಗಳ ಕುರಿತಂತೆ ರಾಜ್ಯ ಸರ್ಕಾರದ ಕಾರ್ಯ ಯೋಜನೆಗಳ ಮಾಹಿತಿಯನ್ನು    ಆನ್‍ಲೈನ್ ಮುಖಾಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವೈದ್ಯ ಮತ್ತು ಅರೆ ವೈದ್ಯ ಸಿಬ್ಬಂದಿಗಳಿಗೆ  ನೀಡಿದರು.  

ತಜ್ಞರುಗಳಾದ  ಡಾ. ಸೀತಾರಾಮ್, 
ಡಾ. ವಂದನಾ ಭಾರದ್ವಾಜ್,   ಡಾ. ಚೈತಾಲಿ, ಡಾ. ಗೀತಾ,    ಡಾ. ಪಿ.ವಿ ಭಂಡಾರಿ,  ಡಾ. ರಕ್ಷಾ  ಪ್ರಕಾಶ್‌  ಮತ್ತಿತರರು ಭಾಗವಹಿಸಿದ್ದರು. 

 ಹಿಮೋಫಿಲಿಯಾ  ಸೊಸೈಟಿ  ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ. ಮೀರ ಹನಗವಾಡಿ    ಮತ್ತು  ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಪಿ. ಹವಳಿ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಡಾ. ಸೌಜನ್ಯ   ನಿರೂಪಿಸಿದರು.

error: Content is protected !!