ಶಿವನ ಆರಾಧನೆಯಿಂದ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಇಮ್ಮಡಿ

ಶಿವನ ಆರಾಧನೆಯಿಂದ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಇಮ್ಮಡಿ

ಶಿವರಾತ್ರಿ ಕಾರ್ಯಕ್ರಮ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಬ್ರಹ್ಮಾಕುಮಾರಿ ಶಿವದೇವಿ

ಹರಿಹರ, ಮಾ. 10 – ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ಶಿವರಾತ್ರಿ ಕಾರ್ಯಕ್ರಮ ಮತ್ತು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವದೇವಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವದೇವಿ ಅವರು, ಶಿವನ ಆರಾಧನೆ ಮತ್ತು ಧ್ಯಾನವನ್ನು ಮಾಡುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗುತ್ತದೆ ಮತ್ತು ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಇಮ್ಮಡಿಯಾಗುತ್ತದೆ ಎಂದು ಹೇಳಿದರು.

ಈ ವೇಳೆ ಮಹಿಳಾ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯನಿರ್ವಾಹಕರಾದ ಶ್ರೀಮತಿ ಸುಮನ್ ಖಮಿತ್ಕರ್, ಸಂಕರ್ಷಣ ನೃತ್ಯಾಲದ ಅಧ್ಯಕ್ಷೆ ವಿಧುಷಿ ಶ್ರೀಮತಿ ರಾಧಾ ಬಾಸ್ಕರ್,  ಮಹಿಳಾ ಸಮಾಜ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನಿ ಶ್ರೀಮತಿ ಕಮಲವ್ವ ತಾವರೆ, ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ   ಶ್ರೀಮತಿ ಶಾಂಭವಿ ನಾಗರಾಜ್, ಕುರುಹಿನಶೆಟ್ಟಿ ಮಹಿಳಾ ಮಂಡಳಿಯ ಅಧ್ಯಕ್ಷೆ  ಶ್ರೀಮತಿ ಸರಸ್ವತಿ ಕೊಟ್ರೇಶಪ್ಪ ಐರಣಿ, ಅಂತರರಾಷ್ಟ್ರೀಯ ಯೋಗ ಪಟು ಕು. ಸೃಷ್ಟಿ ಅವರುಗಳನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಶಿವದೇವಿ ಗೌರವ ಸನ್ಮಾನವನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ಸಹ ಸಂಚಾಲಕರಾದ ಅನುಸೂಯ ಹಾಗೂ ಭಾಗ್ಯ, ಸಂಗೀತ, ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ಸಂಕರ್ಷಣ ನೃತ್ಯ ಲಯದ ವಿದುಷಿ, ರಾಧಾ, ಭಾಸ್ಕರ್ ಅವರು ಹಾಗೂ ಅವರ ಶಿಷ್ಯ ವೃಂದದವರು ಶಿವ ಭಕ್ತಿ ಪ್ರಧಾನ ನೃತ್ಯವನ್ನು ಪ್ರಸ್ತುತ ಪಡಿಸಿದರು ಹಾಗೂ ಅಂತರರಾಷ್ಟ್ರೀಯ ಯೋಗ ಪಟು ಕು. ಸೃಷ್ಟಿ ಇವರು ಸಹ ಯೋಗಾಸನ ಪ್ರದರ್ಶನವನ್ನು ನೀಡಿದರು. ನಂತರ ಶಿವ ಧ್ವಜಾರೋಹಣ ನೆರವೇರಿತು ಆನಂತರ, ವೇದಘೋಷ ದೊಂದಿಗೆ ದ್ವಾದಶ ಜ್ಯೋತಿರ್ಲಿಂಗಗಳ ಶೋಭಾಯಾತ್ರೆಯು ಯಶಸ್ವಿಯಾಗಿ ಪೂರ್ಣಗೊಂಡಿತು.

error: Content is protected !!