ದಾವಣಗೆರೆ, ಮಾ.10- ಉದ್ಯಾನವನ ಅಭಿವೃದ್ಧಿ ಸಮಿತಿಯಿಂದ ನಗರದ ಸರಸ್ವತಿ ಬಡಾವಣೆಯ ಪಂಚಮುಖಿ ಆಂಜನೇಯ ದೇವಸ್ಥಾನದ ಪಾರ್ಕಿನಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಜಿ. ಯಲ್ಲಪ್ಪ, ಶಿವನ ನಾಮ ಸ್ಮರಣೆ ಮಾಡುತ್ತಾ, ಶಿವನ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಹಿರಿಯ ವರದಿಗಾರ ಬಸವರಾಜ್ ದೊಡ್ಡಮನಿ ಮಾತನಾಡಿ, ಸಮಿತಿಯು ಉದ್ಯಾನವನ ಅಭಿವೃದ್ಧಿಯ ಜತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನೂ ಸಹ ಆಚರಿಸುತ್ತಿರುವುದನ್ನು ಶ್ಲ್ಯಾಘಿಸಿದರು.
ಇದೇ ವೇಳೆ ಡಾ. ಮಂಜುನಾಥ್ ಅವರನ್ನು ಸನ್ಮಾನಿಸಿದರು ಮತ್ತು ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಎಂ. ಸೋಮಶೇಖರಪ್ಪ ಮಾತನಾಡಿದರು. ಜಿ. ಚೌಡಪ್ಪ ಸ್ವಾಗತಿಸಿದರು. ನಾಗಭೂಷಣ ನಾಡಿಗೇರ್ ಮತ್ತು ಜಿ.ಟಿ. ಬಸವರಾಜಪ್ಪ ನಿರೂಪಣೆ ಮಾಡಿದರು. ಎನ್.ಎಂ. ಪರಮೇಶ್ವರಪ್ಪ ವಂದಿಸಿದರು. ಕೆ.ಎಂ. ಮಂಜುಳಾ ಮಾತನಾಡಿದರು.
ಕೆ.ವಿ. ಅನಸೂಯ, ನಾಗರತ್ನ ಲೀಲಾವತಿ, ಸಮಿತಿಯ ರವಿಕುಮಾರ್, ಅಣ್ಣಪ್ಪ, ಆಂಜನೇಯ, ವಿಶ್ವನಾಥ ವಿ. ಕುಲಕರ್ಣಿ, ದೇವರಾಜ್, ಭರತ್ ಕುಮಾರ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ವಂದನಾ ವಿ. ಕುಲಕರ್ಣಿ, ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.