ಭಾನುವಳ್ಳಿಯಲ್ಲಿ ನಾಮಫಲಕ, ಪ್ರತಿಮೆ ತೆರವು : ಅಚ್ಚರಿ

ಭಾನುವಳ್ಳಿಯಲ್ಲಿ ನಾಮಫಲಕ, ಪ್ರತಿಮೆ ತೆರವು : ಅಚ್ಚರಿ

ಮಲೇಬೆನ್ನೂರು, ಮಾ.8- ಭಾನುವಳ್ಳಿ ಗ್ರಾಮದಲ್ಲಿ ಈ ಹಿಂದೆ ಹಾಕಲಾಗಿದ್ದ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ, ಸಾಮ್ರಾಟ್ ಅಶೋಕ ಅವರ ಹೆಸರಿನ ರಸ್ತೆ, ಸರ್ಕಲ್‌ ಮತ್ತು ಬಡಾವಣೆಗಳ ನಾಮಫಲಕಗಳನ್ನು ಕುರುಬ ಸಮಾಜದವರು ಶುಕ್ರವಾರ ಏಕಾಏಕಿ ತೆರವುಗೊಳಿಸಿದ್ದಾರೆ.

ಅಲ್ಲದೇ, ಇತ್ತೀಚೆಗೆ ಪ್ರತಿಷ್ಠಾಪಿಸಿದ್ದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನೂ ತೆರವುಗೊಳಿಸಿ, ಬೀರ ದೇವರ ದೇವಸ್ಥಾನದಲ್ಲಿ ತಂದಿಟ್ಟಿದ್ದಾರೆ.

ಜಿಲ್ಲಾಡಳಿತ ತೆರವು ಮಾಡಿದ್ದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿ ಸಬೇಕು ಮತ್ತು ಅನಧಿಕೃತವಾಗಿ ನಿರ್ಮಿಸಿರುವ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತದ ನಾಮಫಲಕವನ್ನು ತೆರವು ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕುರುಬ ಸಮಾಜದವರು ಶುಕ್ರವಾರ ಸ್ವಯಂ ಪ್ರೇರಣೆಯಿಂದ ತಮಗೆ ಸೇರಿದ ಎಲ್ಲಾ ನಾಮಫಲಕಗಳನ್ನು ತೆರವುಗೊಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಏತನ್ಮಧ್ಯೆ, ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಪ್ರತಿಮೆ ವಿಚಾರವಾಗಿ ಉಂಟಾಗಿರುವ ಗೊಂದಲಗಳನ್ನು ಸರಿಪಡಿಸಲು ಸತ್ಯಶೋಧನಾ ಸಮಿತಿ ರಚಿಸಿ ವರದಿ ನೀಡುವಂತೆ ತಿಳಿಸಿದ್ದಾರೆ.

ಗ್ರಾಮದಲ್ಲಿ ಪೊಲೀಸ್ ಭದ್ರತೆಯನ್ನು ಮುಂದುವರೆಸಿದ್ದಾರೆ.

error: Content is protected !!