ಹರಿಹರದಲ್ಲಿ ಶ್ರದ್ಧಾ – ಭಕ್ತಿಯ ಮಹಾಶಿವರಾತ್ರಿ ಆಚರಣೆ

ಹರಿಹರದಲ್ಲಿ ಶ್ರದ್ಧಾ – ಭಕ್ತಿಯ ಮಹಾಶಿವರಾತ್ರಿ ಆಚರಣೆ

ಹರಿಹರ, ಮಾ.8- ನಗರದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.

ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನ, ಮಹಾಲಕ್ಷ್ಮಿ ದೇವಸ್ಥಾನ, ಹೊಸಭರಂಪುರ 108 ಲಿಂಗೇಶ್ವರಸ್ವಾಮಿ ದೇವಸ್ಥಾನ, ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ, ಹರ ಮಠದ ಶಿವಲಿಂಗೇಶ್ವರ ದೇವಸ್ಥಾನ, ಕುಂಬಳೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಗ್ರಾಮ ದೇವತೆ ಕಸಬಾ ಮತ್ತು ಮಾಜೇನಹಳ್ಳಿ ಊರಮ್ಮ ದೇವಿ ದೇವಸ್ಥಾನ, ಕೋಟಿ ದತ್ತಾತ್ರೇಯ ಸ್ವಾಮಿ ದೇವಸ್ಥಾನ, ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ರಾಮಸೀತೆ ದೇವಸ್ಥಾನ, ವಾಸವಿ ದೇವಸ್ಥಾನ, ಬನಶಂಕರಿ ದೇವಿ ದೇವಸ್ಥಾನ, ಮೂಕಬಸವೇಶ್ವರ ದೇವಸ್ಥಾನ, ಭರಂಪುರ ಊರಮ್ಮ ದೇವಿ ಮತ್ತು ಚೌಡೇಶ್ವರಿ ದೇವಸ್ಥಾನ, ಮೌನೇಶ್ವರ ಸ್ವಾಮಿ ದೇವಸ್ಥಾನ, ಕೆಇಬಿ ಗಣೇಶ ದೇವಸ್ಥಾನ, ಶಿರಡಿ ಸಾಯಿಬಾಬಾ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ, ಹರ್ಲಾಪುರ ಬಸವೇಶ್ವರ ದೇವಸ್ಥಾನ, ಸ್ವಾಮಿ ವಿವೇಕಾನಂದ ಆಶ್ರಮ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೇವರುಗಳಿಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ನಡೆದವು.

ಪ್ರಮುಖವಾಗಿ ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ಶ್ರೀ ಹರಿಹರೇಶ್ವರ ದೇವರಿಗೆ ನಾರಾಯಣ ಜೋಯಿಸರು, ಚಿದಂಬರ ಜೋಯಿಸರು, ಹರಿ ಶಂಕರ್ ಜೋಯಿಸರು, ಲಕ್ಷ್ಮೀಕಾಂತ್ ಜೋಯಿಸರು, ಪ್ರಧಾನ ಅರ್ಚಕರಾದ ಶ್ರೀನಿವಾಸ್ ಮೂರ್ತಿ, ಗುರುಪ್ರಸದ್ ಸೇರಿದಂತೆ ಅನೇಕ ಅರ್ಚಕರ ಸಮ್ಮುಖದಲ್ಲಿ ಸ್ವಾಮಿಗೆ ಅಭಿಷೇಕ, ಸಹಸ್ರಾರ ನಾಮ, ಬಿಲ್ವಾರ್ಚಾನೆ, ಪುಷ್ಪಾರ್ಚಾನೆ, ಮಹಾಮಂಗಳಾರತಿ ಸೇರಿದಂತೆ ಹಲವು ಬಗೆಯ ಪೂಜಾ ಕಾರ್ಯಗಳು ಬೆಳಗಿನ ಜಾವದಲ್ಲಿ ಆರಂಭಗೊಂಡು ತಡ ರಾತ್ರಿಯವರಿಗೆ ನಡೆದವು. ‌

ದಿನೇಶ್ ಕೊಣ್ಣೂರ ಮತ್ತು ಕಿರಣ್ ಕುಮಾರ್ ಹಾಗೂ ಗಜಾನನ ಸೇವಾ ಸಮಿತಿಯಿಂದ ಅವಲಕ್ಕಿ ವಿತರಣೆ, ಸೋನಿ ಮತ್ತು ಪ್ರಭಾಕರ್ ತಂಡದವರಿಂದ ಬಾದಾಮಿ ಹಾಲು ವಿತರಣೆ ಮಾಡಲಾಯಿತು.

ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವನ ಸ್ವರೂಪದ ಲಿಂಗಗಳ ಮೆರವಣಿಗೆ ಮಾಡಲಾಯಿತು. ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶ್ರೀದೇವಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.   

ಶ್ರೀ ಹರಿಹರೇಶ್ವರ ದೇವಾಲಯದ ಆವರಣದಲ್ಲಿ ಮಹಾತಪಸ್ವಿ ಪಂಡಿತ ಕವಿರಾಜ್ ನೇತೃತ್ವದಲ್ಲಿ ನಗರದ ಪಕ್ಕಿ ರಸ್ವಾಮಿ ಮಠ, ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹರಿಹರೇಶ್ವರ ದೇವಸ್ಥಾನ, 108 ಲಿಂಗೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಒಟ್ಟು ಐದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಷ್ಟೈಶ್ವರ್ಯಕ್ಕೆ  ಶಿವಾಷ್ಟೋತ್ತ  ನಾಮಾವಳಿ ಅಭಿಯಾನ ಪುಸ್ತಕಗಳನ್ನು ಹಂಚಿಕೆ ಮಾಡಿದ್ದರು. ಶಾಸಕ ಬಿ.ಪಿ. ಹರೀಶ್ ಈ ಕಾರ್ಯಕ್ಕೆ ಚಾಲನೆ ನೀಡಿದರು. ಸಿ.ಕೆ. ಗುರುಪ್ರಸಾದ್ ಮತ್ತು ಕೃತಿಕ ಶಿವ- ಪಾರ್ವತಿ ವೇಷ ಭೂಷಣ ಧರಿಸಿ ಗಮನಸೆಳೆದರು.

ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ನಾರಾಯಣ ಜೋಯಿಸರು, ಹರಿಶಂಕರ್ ಜೋಯಿಸರು, ಪ್ರಧಾನ ಅರ್ಚಕ ಶ್ರೀನಿವಾಸ್ ಮೂರ್ತಿ, ಗುರುಪ್ರಸಾದ್,  ಶೇಷಾಚಲ, ನಗರಸಭೆ ಅಧ್ಯಕ್ಷೆ ಸುಜಾತ ರೇವಣಸಿದ್ದಪ್ಪ ಅಮರಾವತಿ, ಮಾಜಿ ಉಪಾಧ್ಯಕ್ಷೆ ಅಂಬುಜಾ ಪಿ. ರಾಜೊಳ್ಳಿ, ಧರ್ಮಸ್ಥಳ ಸಂಘದ ಮುಖ್ಯಸ್ಥ ಗಣಪತಿ ಮಾಳಂಜೆ, ಯಶೋಧ ಚಿದಾನಂದ, ದಿನೇಶ್ ಕಣ್ಣೂರು, ಕಿರಣ್ ಕುಮಾರ್ ಕವಿತಾ ಪೇಟೆ ಮಠ್, ಯೋಗಿಶ್, ಶಿವಯೋಗಿಸ್ವಾಮಿ ಕತ್ತಲಗೇರಿ, ಕರಿಬಸಪ್ಪ ಕಂಚಿಕೇರಿ, ಗುರುಪ್ರಸದ್ ಸಿ.ಕೆ. ಪ್ರಭಾಕರ್, ಸುಧಾ ಸೊಳಂಕಿ, ರಶ್ಮಿ ಕಾಟ್ವೆ, ಮಂಜುಳಮ್ಮ, ಅನ್ವಿತ, ಕೃತಿಕಾ, ಪುಟ್ಟಮ್ಮ, ಇತರರು ಹಾಜರಿದ್ದರು.

error: Content is protected !!