ಮಲೇಬೆನ್ನೂರು, ಮಾ.6- ಬೆಂಗಳೂರಿನ ಕನ್ನಡ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹರಿಹರದ ಯುವ ಬರಹಗಾರ ಆರ್.ಧನರಾಜ್ ಅವರ `ತೋಚಿದಷ್ಟೇ.. ಗೀಚಿದ್ದು’ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್.ತಂಗಡಗಿ, ಖ್ಯಾತ ಸಾಹಿತಿ, ಚಿಂತಕ ನಾಡೋಜ ಡಾ. ಬರಗೂರು ರಾಮಚಂದಪ್ಪ ಅವರು ಬಿಡುಗಡೆ ಮಾಡಿದರು.
ಈ ವೇಳೆ ಧನರಾಜ್ ಅವರನ್ನು ಸರ್ಕಾರದಿಂದ ಸನ್ಮಾನಿಸಿ, ಅಭಿನಂದಿಸಿ, ಪ್ರೋತ್ಸಾಹಿಸಲಾಯಿತು. ಲೇಖಕ ಜೋಗಿ, ಡಾ. ಧರಣಿದೇವಿ ಮಾಲಗತ್ತಿ ಮತ್ತಿತರರು ಈ ವೇಳೆ ಹಾಜರಿದ್ದರು.