ಎಲ್ಲರನ್ನೂ ಮನುಷ್ಯತ್ವದಿಂದಲೇ ಕಾಣಬೇಕು

ಎಲ್ಲರನ್ನೂ ಮನುಷ್ಯತ್ವದಿಂದಲೇ ಕಾಣಬೇಕು

ಉಡುಪು, ಆಹಾರ ವಿತರಣೆಯಲ್ಲಿ ಶಿಕ್ಷಕ ಕೊಟ್ರೇಶ್ 

ಹರಿಹರ, 5- ಮನುಷ್ಯ ಜನ್ಮದಲ್ಲಿ ಹುಟ್ಟಿದ ನಾವುಗಳು ಎಲ್ಲರನ್ನೂ ಮನುಷ್ಯತ್ವ ದಿಂದಲೇ ಕಾಣಬೇಕು. ಮನುಷ್ಯರನ್ನು ಪ್ರೀತಿಸ ಬೇಕು, ಗೌರವಿಸಬೇಕು, ಆದರಿಸಬೇಕು. ಇಲ್ಲದಿದ್ದರೆ ನಾವು ಮನುಷ್ಯರಾಗಿ ಇರಲು ಯೋಗ್ಯರಾಗಿರುವುದಿಲ್ಲ ಎಂದು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೊಟ್ರೇಶ್ ಹಳ್ಳಿ ಹೇಳಿದರು.

ಹೊಂಗಿರಣ ಸೇವಾ ಟ್ರಸ್ಟ್  ಮತ್ತು ನಾರಾಯಣ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ   ಆಶ್ರಯದಲ್ಲಿ   ಅಮರಾವತಿ ಬಡಾವಣೆಯ ಸುಧಾಮ ಹೋಮ್ಸ್ ಆಶ್ರಮದ  ನಿರಾಶ್ರಿತರಿಗೆ ಹಮ್ಮಿಕೊಳ್ಳಲಾಗಿದ್ದ ಉಡುಪು ಮತ್ತು ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಹೊಂಗಿರಣ ಸೇವಾ ಟ್ರಸ್ಟ್‍ನ ಕಾರ್ಯದರ್ಶಿಗಳು ಮತ್ತು ನಾರೇಯಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರೂ ಆದ ಎನ್.ಬಿ.ಗಣೇಶ್  ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷರು ಹಾಗೂ ಹೊಂಗಿರಣ ಸೇವಾ ಟ್ರಸ್ಟಿನ ಖಜಾಂಚಿ ವಿಷ್ಣುಮೂರ್ತಿ ಎಸ್. ಎನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಸುರೇಶ್ ಹೆಚ್. ಎನ್, ಮರಿಸ್ವಾಮಿ, ನವೀನ್, ರಾಕೇಶ್, ಪ್ರಸನ್ನ, ಹರೀಶ್, ಗಿರೀಶ್, ಮಂಜಪ್ಪ, ಅಶ್ಫಾಕ್ ಉಪಸ್ಥಿತರಿದ್ದರು.

error: Content is protected !!