ಹೊನ್ನಾಳಿ, ಮಾ. 6 – ತಾಲ್ಲೂಕಿನ ಮಲೆಕುಂಬಳೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥವನ್ನು ಬಣ್ಣ, ಬಣ್ಣದ ಬಾವುಟಗಳು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯ ರಥ ಎಳೆಯಲಾಯಿತು. ಸಹಸ್ರಾರು ಭಕ್ತರು ಶ್ರೀ ಆಂಜನೇಯ ಸ್ವಾಮಿಗೆ ಜಯಘೋಷ ಹಾಕುತ್ತಾ ತೇರು ಎಳೆದು ಭಕ್ತಿ ಸಮರ್ಪಿಸಿದರು. ರಥಕ್ಕೆ ಬಾಳೆಹಣ್ಣು, ಕಾಳುಮೆಣಸು ಮತ್ತಿತರೆ ವಸ್ತುಗಳನ್ನು ಭಕ್ತರು ಸಮರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿದರು.
ಮಲೆಕುಂಬಳೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಮುಖಂಡ ಕೆ.ಬಿ. ರಾಜಶೇಖರಪ್ಪ, ಕೆ.ಆರ್. ವರದರಾಜಪ್ಪ, ಟಿ.ಎಸ್. ಕೃಷ್ಣಪ್ಪ, ಬಿ.ಎಚ್. ವಾಗೀಶ್, ಜಿ.ಇ. ಸುಧಾಕರ್, ಮಾರುತಿ, ಜಿ.ಆರ್. ಪ್ರಕಾಶ್ ಇತರರು ಪಾಲ್ಗೊಂಡಿದ್ದರು.
ಶ್ರೀ ಆಂಜನೇಯ ಸ್ವಾಮಿ ಮುಳ್ಳೋತ್ಸವ: ಇಂದು ಓಕುಳಿ, ಭೂತನ ಸೇವೆ ಹಾಗೂ ಕಂಕಣ ವಿಸರ್ಜನೆ ಕಾರ್ಯಕ್ರಮಗಳು ನಡೆಯಲಿವೆ.