ದಾವಣಗೆರೆ, ಮಾ. 6- ದೇಶದ ಎಲ್ಲಾ ವರ್ಗದ ಜನರನ್ನು ಸ್ವಾಭಿಮಾನಿ ಯನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗರ್ಭದಲ್ಲಿರುವ ಶಿಶುವಿನಿಂದ ಹಿಡಿದು ವಯೋವೃದ್ಧರಿಗೆ ಅನೇಕ ಉಪಯುಕ್ತ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಈ ಪೈಕಿ ನಾರಿಶಕ್ತಿ ವಂದನಾ ಕಾರ್ಯಕ್ರಮ ಅತ್ಯುತ್ತಮವಾದುದು ಎಂದು ಉತ್ತರ ಕನ್ನಡ ಜಿಲ್ಲಾ ಪ್ರಭಾರಿ ಹಾಗೂ ಕಾರ್ಯಕ್ರಮದ ಉಸ್ತುವಾರಿ ಭಾರತಿ ಜಂಬಗಿ ಹೇಳಿದರು.
ನಗರದ ಕೆ.ಬಿ.ಬಡಾವಣೆಯ ಜಿಲ್ಲಾ ಬಿಜೆಪಿ ಕಚೇರಿಯಿಂದ ಪ್ರಾರಂಭವಾದ `ನಮ್ಮ ನಡಿಗೆ ಮೋದಿ ಕಡೆಗೆ’ ಎಂಬ ನಾರಿ ವಂದನಾ ಮ್ಯಾರಥಾನ್ (ಪಾದಯಾತ್ರೆ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೋದಿ ಅವರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದರ ಭಾಗವಾಗಿ ದಾವಣಗೆೆರೆ ಜಿಲ್ಲಾ ಮಹಿಳಾ ಮೋರ್ಚಾದಿಂದ ಮೂರನೇ ದಿನದ `ನಾರಿ ಶಕ್ತಿ ವಂದನಾ’ ಜಾಥಾ ನಡೆಸಲಾಯಿತು ಎಂದರು.
ದೇಶಾದ್ಯಂತ ನಡೆಯುತ್ತಿರುವ ಸಮೀಕ್ಷೆಯಲ್ಲಿ ಮೋದಿಯವರ ಪರ ಉತ್ತಮ ಸ್ಪಂದನೆ ದೊರೆತಿದೆ. ಈ ನಿಟ್ಟಿನಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಮೋದಿ ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು.
ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಪುಷ್ಪ ವಾಲಿ ಮಾತನಾಡಿ, ನಮ್ಮ ನಡಿಗೆ ಮೋದಿ ಕಡೆಗೆ ಎನ್ನುವ ಘೋಷ ವಾಕ್ಯದೊಂದಿಗೆ ಮಾತೃ ಹೃದಯದ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಭಾಗ್ಯ ಪಿಸಾಳೆ, ಸಾವಿತ್ರಮ್ಮ, ರೇಣುಕಮ್ಮ ಬಣಕಾರ್, ಚಂದ್ರಕಲಾ, ಜಯಲಕ್ಷ್ಮಿ, ಧರ್ಮಿಬಾಯಿ, ಸವಿತಾ, ಮಂಜುಳಾ, ರೇಣುಕಾ ಕೃಷ್ಣ, ನೀತಾ, ಸಾವಿತ್ರಿ, ಯಲ್ಲಮ್ಮ, ಕುಸುಮ ಮತ್ತಿತರರು ಭಾಗವಹಿಸಿದ್ದರು.