ರಾಣೇಬೆ ನ್ನೂರು, ಮಾ. 5 – ಫೆ. 11 ಮತ್ತು 12 ರಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಸಲ್ಲಿಸಲಾಗಿದೆ. ಸಮ್ಮೇಳನಕ್ಕಾಗಿ 23.89 ಲಕ್ಷ ಹಣ ಸಂಗ್ರಹಿಸಲಾಗಿದ್ದು, ಎಲ್ಲ ಖರ್ಚು ತೆಗೆದು ಅಂತಿಮವಾಗಿ 2.99 ಲಕ್ಷ ಹಣ ಉಳಿದಿದೆ ಎಂದು ಲೆಕ್ಕಪತ್ರ ಒಪ್ಪಿಸಿದ ಗೌರವಾಧ್ಯಕ್ಷ ಏಕನಾಥ ಭಾನುವಳ್ಳಿ ಅವರು, ಇದುವರೆಗೂ ನಡೆದ 12 ಸಮ್ಮೇಳನದ ಲೆಕ್ಕ ಪತ್ರವನ್ನು ಯಾವ ಸಮಿತಿಯವರು ಒಪ್ಪಿಸಿದ್ದಿಲ್ಲ, ಇದು ನಮ್ಮ ಹೆಗ್ಗಳಿಕೆ ಎಂದು ಅಭಿಪ್ರಾಯಿಸಿದರು.
ಎಲ್ಲ ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಮಹಿಳಾ ಮತ್ತು ವಿವಿಧ ಕನ್ನಡ ಪರ ಸಂಘಟನೆಯವರು, ಪೌರ ಕಾರ್ಮಿಕರು, ವಿದ್ಯಾ ಸಂಸ್ಥೆಗಳು, ಕಸಾಪ ಆಜೀವ ಸದಸ್ಯರು ಈ ದಿಶೆಯಲ್ಲಿ ಸಹಾಯ ಸಹಕಾರ ನೀಡಿ ಸಮ್ಮೇಳನ ಯಶಸ್ವಿಗೊಳಿಸಿದ್ದಕ್ಕೆ ಏಕನಾಥ ಸಂತಸ ವ್ಯಕ್ತಪಡಿಸಿದರು.
ಕಸಾಪ ಭವನದಲ್ಲಿ ನಿನ್ನೆ ನಡೆದ ಲೆಕ್ಕಪತ್ರ ಸಲ್ಲಿಕೆ ಸಭೆಯಲ್ಲಿ ಸಮಿತಿಯ ಪುಟ್ಟಪ್ಪ ಮರಿಯಮ್ಮನವರ, ಎಂ.ಎಸ್. ಅರಕೇರಿ, ಪ್ರಭಾವತಿ ತಿಳವಳ್ಳಿ, ಸರೋಜಿನಿ ಭರಮಗೌಡ್ರ, ಬಿ.ಪಿ. ಶಿಡೇನೂರ, ಪ್ರಕಾಶ ಜೈನ್, ಜಿ.ಜಿ. ಹೊಟ್ಟಿಗೌಡ್ರ, ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಅಧ್ಯಕ್ಷ ಜಂಬಗಿ ವೀರೇಶ, ಇಂದಿರಾ ಬಾರಂಗಿ, ಪ್ರಭಾಕರ ಶಿಗ್ಲಿ ಹಾಗೂ ಡಾ. ಗಣೇಶ ದೇವಗಿರಿಮಠ ಅವರು ಮಾತನಾಡಿದರು.