ಪುಟ್ಟರಾಜ ಗವಾಯಿಗಳವರ ಜನ್ಮ ದಿನೋತ್ಸವ ಆಚರಣೆ

ಪುಟ್ಟರಾಜ ಗವಾಯಿಗಳವರ ಜನ್ಮ ದಿನೋತ್ಸವ ಆಚರಣೆ

ದಾವಣಗೆರೆ, ಮಾ. 5 – ಪಂಡಿತ್ ಪುಟ್ಟರಾಜ ಸೇವಾ ಸಮಿತಿ  (ಗದಗ)ಯ  ದಾವಣಗೆರೆ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕಗಳಿಂದ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳವರ ಜನ್ಮ ದಿನೋತ್ಸವವನ್ನು ಅರ್ಥ ಪೂರ್ಣವಾಗಿ ನಗರದ ಪಿ.ಬಿ. ರಸ್ತೆಯಲ್ಲಿರುವ ಹೋಟೆಲ್ ಶ್ರೀಗಂಧ ರೆಸಿಡೆನ್ಸಿಯಲ್ಲಿ ನಿನ್ನೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪಿ.ಬಿ. ವಿನಾಯಕ ಮಾತನಾಡಿ, ಪೂಜ್ಯರ ಯಾವುದೇ ಕಾರ್ಯಕ್ರಮಗಳನ್ನು ನಾವು ಮಾಡಬೇಕೆಂದುಕೊಂಡರೆ ಗುರುಗಳು ನಮಗೆ ಆ ಶಕ್ತಿಯನ್ನು ನೀಡುತ್ತಾರೆ. ಅವರ ಆಶೀರ್ವಾದ ಒಂದಿದ್ದರೆ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರುತ್ತದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷರಾದ ಸೌಮ್ಯ ಸತೀಶ್ (ಧಾರವಾಡ), ಆನಂದ್ ಪಾಟೀಲ್, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಸಿರಿಗೆರೆ ಅವರುಗಳು ಮಾತನಾಡಿ, ಪುಟ್ಟರಾಜ ಗವಾಯಿಗಳು ನಡೆದು ಬಂದ ದಾರಿ, ಅವರು ಸಂಗೀತ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ, ಸಾವಿರಾರು ಅಂಧರಿಗೆ ದಾರಿ ದೀಪವಾಗಿರುವ ಜೀವನವನ್ನು ತಮ್ಮದೇ ಶೈಲಿಯಲ್ಲಿ ನೆರೆದಿದ್ದ ಎಲ್ಲ ಭಕ್ತರಿಗೂ ಉಣಬಡಿಸಿದರು.

ಸಂಗೀತಗಾರ ಆನಂದ್ ಪಾಟೀಲ್ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ ಮತ್ತು ಘಟಕದ ಉಪಾಧ್ಯಕ್ಷ ರೇವಣಸಿದ್ದಪ್ಪ ಅವರ ಶಿಷ್ಯಂದಿರಿಂದ ಸಂಗೀತ ಕಾರ್ಯಕ್ರಮ ಮತ್ತು ನಂದೀಶ್ ಅವರಿಂದ ಕೊಳಲು ವಾದನ ನಡೆಯಿತು 

ಜ್ಯೂನಿಯರ್ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ವಿನಾಯಕ ಪಿ.ಬಿ. ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸತೀಶ್ ಧಾರವಾಡ ಪ್ರಶಸ್ತಿ ವಿತರಿಸಿ ಗೌರವಿಸಿದರು. ಮಮತಾ ನಾಗರಾಜ ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ರೇವಣ ಸಿದ್ಧಪ್ಪ,  ವನಜ ಮಹಾಲಿಂಗಯ್ಯ,  ವಿಕ್ರಂ ಜೋಶಿ, ಅಭಿಷೇಕ್ ಎಸ್.ಆರ್. ಶ್ರೀನಿವಾಸ್ ಕುಂದೂರ್, ಮಮತಾ ನಾಗರಾಜ, ಪುಷ್ಪ ಎನ್.ಎಚ್, ಹಾಲೇಶ್, ಅನುಷಾ, ಮಂಜುಳಾ, ಮಂಜುಳಾ ಹುಂಡೇಕರ್, ಪುಷ್ಪ ವೀರೇಶ್, ಶಾಂತ ಶಿವಶಂಕರ, ಲತಾ ಕಪಾಲಿ, ರಾಜಶ್ರೀ, ಸುಜಾತ, ಜ್ಯೋತಿ, ಸುಭಾಷಿನಿ, ಪೂರ್ಣಿಮಾ, ಚೈತ್ರ, ಮಮತಾ, ಸುಮಾ, ವಿದ್ಯಾ, ಶೋಭಾ ಉಪಸ್ಥಿತರಿದ್ದರು.

error: Content is protected !!