ಹರಪನಹಳ್ಳಿ, ಮಾ. 4- ತಾಲ್ಲೂಕಿನ ವೊಡ್ಡಿನಹಳ್ಳಿ ಗ್ರಾಮದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯನ್ನು ಸಂಸದ ಜಿ.ಎಂ. ಸಿದ್ಧೇಶ್ವರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷೆ ರೇಖಾ, ಮುಖಂಡರಾದ ಮಹಾಬಲೇಶ್ವರಗೌಡ್ರು, ಗ್ರಾ.ಪಂ. ಮಾಜಿ ಅಧ್ಯಕ್ಷೆ ಉಮಾ ಎಸ್.ಎಸ್. ಮಂಜುನಾಥ್ ವೊಡ್ಡಿನಹಳ್ಳಿ, ಪಿ. ಲಿಂಗೇಶ್, ಡಿ. ಕರಿಬಸಪ್ಪ, ಅಂಗಡಿ ಪ್ರಕಾಶ್, ಪರಶುರಾಮ್, ತಿಮ್ಮಣ್ಣ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್, ಸದಸ್ಯರು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.