ಹೊನ್ನಾಳಿ : ವಿಜ್ಞಾನ ಜಾತ್ರೆ ಕಾರ್ಯಕ್ರಮದಲ್ಲಿ ಸಿ.ವಿ ರಾಮನ್ ವಿಜ್ಞಾನ ಸಂಘದ ಅಧ್ಯಕ್ಷರಾದ ಡಾ. ಶಕುಂತಲಾ ರಾಜ್ ಕುಮಾರ್
ಹೊನ್ನಾಳಿ,ಮಾ. 1 – ಹೊಸ ಆವಿಷ್ಕಾರಗಳನ್ನು ನಾವು ಮಕ್ಕಳ ಎಳೆಯ ವಯಸ್ಸಿನಲ್ಲಿಯೇ ಕಾಣಲು ಸಾಧ್ಯ, ಇದನ್ನು ನಾವು ಕಾಣ ಬೇಕಾದರೆ ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಬಿತ್ತಬೇಕು ಎಂದು ಸಿ.ವಿ ರಾಮನ್ ವಿಜ್ಞಾನ ಸಂಘದ ಅಧ್ಯಕ್ಷೆ ಡಾ. ಶಕುಂತಲಾ ರಾಜ್ ಕುಮಾರ್ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಭಾವಿಸಂ ವಿಜ್ಞಾನ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ, ಆಲೋಚನ ಶಕ್ತಿಯನ್ನು ಆಧುನಿಕತೆ ಮರೆ ಮಾಚುತ್ತಿದೆ ಎಂಬ ಭಾವ ಕಾಡುತ್ತಿದೆ. ಅದನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ಸಣ್ಣದಾಗಿಯೇ ಮಾಡಿದ ಕಾರ್ಯ ಮುಂದೆ ದೊಡ್ಡದಾಗುತ್ತದೆ. ಅವರ ಕೊನೆಯ ವರೆಗೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ, ಮೆಲುಕು ಹಾಕುವಂತೆ ಕಾರ್ಯಕ್ರಮ ಇರಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಎಚ್.ಪಿ ರಾಜ್ ಕುಮಾರ್ ಮಾತನಾಡಿ, ಶಿಕ್ಷಣ ಹೊರೆಯಾಗಬಾರದು. ಇಂದು ಮಕ್ಕಳು ತಮ್ಮ ಕೈಯಿಂದಲೇ ಹಲವು ಮಾದರಿಗಳನ್ನು ಮಾಡಿದ್ದಾರೆ. ಅದು ಅವರಲ್ಲಿ ಆತ್ಮ ವಿಶ್ವಾಸವನ್ನು ವೃದ್ಧಿಸುತ್ತದೆ ಎಂದರು.
ಎಲ್‍ಕೆಜಿ ವಿದ್ಯಾರ್ಥಿಗಳು ತರಕಾರಿ ವೇಷಭೂಷಣದೊಂದಿಗೆ ತರಕಾರಿ ಲೋಕ ಸೃಷ್ಟಿಸಿದ್ದರು. ಯುಕೆಜಿ ವಿದ್ಯಾರ್ಥಿಗಳು ವಿಜ್ಞಾನ ಸಂತೆಯ ಮೂಲಕ ಗಮನ ಸೆಳೆದರು. ಸಾರಿಗೆ ನೀ ಯಾರಿಗೇ? , ಹೂವುಗಳ ಲೋಕ, ಹಣ್ಣುಗಳ ಲೋಕ, ಕಾಳು, ಪಕ್ಷಿ, ಪ್ರಾಣಿಗಳ ಪರಿಚಯದೊಂದಿಗೆ 5, 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳು ತಮ್ಮ ಪಠ್ಯದಲ್ಲಿನ ಚಟುವಟಿಕೆ ಗಳನ್ನು ಮಾಡುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ
ಎ. ಆನಂದ್ ಕುಮಾರ್, ಸಹಕಾರ್ಯದರ್ಶಿ
ಕೆ. ಗಣೇಶ್, ಖಚಾಂಚಿ ಕೆ. ಸೋಮಶೇಖರಪ್ಪ, ನಿರ್ದೇಶಕರಾದ ರೂಪ ಕರಿಸಿದ್ದಪ್ಪ, ಹಾಲೇಶ್ ಕುಂಕೋದ್, ಎಚ್.ಎಂ ಅರುಣ್ ಕುಮಾರ್, ಸುರೇಶ್ ಶೇಟ್, ಪ್ರಕಾಶ್ ಹೆಬ್ಬಾರ್, ಕೊಟ್ರೇಶ್ ಉತ್ತಂಗಿ, ಶಿಕ್ಷಕರಾದ ತಿಮ್ಮೇಶ್ ಆರ್, ಗಿರೀಶ್ ಎನ್.ಎಂ, ರುಕ್ಮಿಣಿ, ಶಶಿಕಲಾ, ನಾಗಮ್ಮ ಎಸ್, ಶಾಯಿಸ್ತ ಬಾನು, ಮಂಜಪ್ಪ, ಅಶೋಕ್ ಎಚ್. ಇದ್ದರು.