ಕೆ. ಶಿವರಾಮ್ ಹೆಸರೇಳುವ ಆಶ್ರಯ ಮನೆ, ಗ್ರಾಮ ವಾಸ್ತವ್ಯ

ಕೆ. ಶಿವರಾಮ್  ಹೆಸರೇಳುವ ಆಶ್ರಯ ಮನೆ,  ಗ್ರಾಮ ವಾಸ್ತವ್ಯ

ಕೆ. ಶಿವರಾಮ್ ಹೆಸರೇಳುವ ಆಶ್ರಯ ಮನೆ, ಗ್ರಾಮ ವಾಸ್ತವ್ಯ - Janathavani

ದಾವಣಗೆರೆ,ಫೆ.29- ಇಂದು ನಿಧನರಾದ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರು 2000ನೇ ಇಸವಿಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಗಮನ ಸೆಳೆಯುವಂತಹ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರಾಜ್ಯವೇ ದಾವಣಗೆರೆ ಜಿಲ್ಲೆಯತ್ತ ನೋಡುವಂತೆ ಮಾಡಿದ್ದರು. ಇಂದು ಸಚಿವರಾಗಿರುವ ಶಾಮನೂರು ಮಲ್ಲಿಕಾರ್ಜುನ್ ಅವರು ಅಂದು ಯುವಜನ ಮತ್ತು ಕ್ರೀಡೆ ಖಾತೆ ಸಚಿವರಾಗಿದ್ದರು. ಎಸ್ಸೆಸ್ಸೆಂ ಅವರ ನೇತೃತ್ವದಲ್ಲಿ ಶಿವರಾಮ್ ಅವರು ಬಡ ಜನರಿಗಾಗಿ ಎಸ್.ಎಂ. ಕೃಷ್ಣ ಬಡಾವಣೆ ಮತ್ತು ಶ್ರೀರಾಮ ನಗರಗಳಲ್ಲಿ ನಿರ್ಮಿಸಿದ್ದ ಸಾವಿರಾರು ಸಂಖ್ಯೆಯ ಆಶ್ರಯ ಮನೆಗಳು ಇಂದು ಅವರ ಹೆಸರು ಹೇಳುವಂತಿವೆ. `ನಮ್ಮ ನಾಡು’ ಹೆಸರಿನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಜಿಲ್ಲಾಡಳಿತವನ್ನೇ ಕೊಂಡೊಯ್ದು ಗ್ರಾಮ ವಾಸ್ತವ್ಯ ಮಾಡುವುದರ ಮೂಲಕ ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇದೇ ರೀತಿ ಬಡ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇಂತಹ ಅನೇಕ ಕಾರ್ಯಕ್ರಮಗಳಲ್ಲಿ ಶಿವರಾಮ್ ಪಾಲ್ಗೊಂಡಿದ್ದ ಮತ್ತು ಕೈಗೊಂಡಿದ್ದ ಕಾರ್ಯಕ್ರಮಗಳ ಚಿತ್ರಗಳನ್ನು ಸೆರೆ ಹಿಡಿದಿದ್ದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿವೇಕ್ ಎಲ್. ಬದ್ದಿ ಅವರ ಸಂಗ್ರಹದಿಂದ ಇಲ್ಲಿ ಪ್ರಕಟಿಸಲಾಗಿದೆ.

ನಗರದಲ್ಲಿ ಇಂದು ಶ್ರದ್ಧಾಂಜಲಿ ಸಭೆ

ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ನಿವೃತ್ತ ಜಿಲ್ಲಾಧಿಕಾರಿಗಳೂ, ಚಿತ್ರ ನಟರೂ ಆಗಿದ್ದ ಕೆ. ಶಿವರಾಂ ಅವರ ಶ್ರದ್ಧಾಂಜಲಿ ಸಭೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಎಸ್. ನಿಜಲಿಂಗಪ್ಪ ಬಡಾವಣೆಯ ಛಲವಾದಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎನ್. ರುದ್ರಮುನಿ ತಿಳಿಸಿದ್ದಾರೆ.

ಕೆ. ಶಿವರಾಮ್ ಹೆಸರೇಳುವ ಆಶ್ರಯ ಮನೆ, ಗ್ರಾಮ ವಾಸ್ತವ್ಯ - Janathavani

ಸಚಿವರನ್ನು ಅಭಿನಂದಿಸಿದ್ದ ಶಿವರಾಮ್

ಶಾಮನೂರು ಮಲ್ಲಿಕಾರ್ಜುನ್ ಅವರು ಈಚೆಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ್ದ ಕೆ. ಶಿವರಾಮ್ ಅಭಿನಂದಿಸಿ, ತಮ್ಮಿಬ್ಬರ ನಡುವಿನ ಹಳೆಯ ದಿನಗಳನ್ನು ಮೆಲಕು ಹಾಕಿದ್ದರು.

error: Content is protected !!