ಮಲೇಬೆನ್ನೂರು, ಫೆ. 29 – ದೇವರಬೆಳಕೆರೆ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವವು ಗುರುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿತು.
ವಿವಿಧ ಕಲಾ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು. ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಥೋತ್ಸವದ ಅಂಗವಾಗಿ ನಾಳೆ ಶುಕ್ರವಾರ ಸಾಯಂಕಾಲ 4.30ಕ್ಕೆ ಕಾಲಶಸ್ತ್ರ ತ್ರಿಶೂಲ ಮತ್ತು ಸರಪಳಿ ಪವಾಡಗಳು ನಡೆಯಲಿದ್ದು, ಸಂಜೆ ಓಕಳಿ ಇರುತ್ತದೆ.