ಹರಪನಹಳ್ಳಿ, ಫೆ. 28 – ತಾಲ್ಲೂಕಿನ ನಂದಿ ಬೇವೂರು ಗ್ರಾಮದ ಕೃಷಿ, ಜ್ಯೋತಿಷ್ಯ, ಪಾರಂಪರಿಕ ವೈದ್ಯ ಸಾಧಕ ಹಾಗೂ ರಂಗ ಕಲಾವಿದ ವೈದ್ಯ ಸಿ.ಎಂ. ಪಂಚಾಕ್ಷರಯ್ಯ ನವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಫೆ. 25 ರಂದು ತಮಿಳುನಾಡಿನ ಹೊಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿ.ಎಂ. ಪಂಚಾಕ್ಷರಯ್ಯ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ತಮಿಳುನಾಡಿನ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿಯು ಈ ಗೌರವ ನೀಡಿದೆಿ.
ಪಂಚಾಕ್ಷರಯ್ಯ ನವರಿಗೆ ಡಾಕ್ಟರೇಟ್
