ದೇವರಬೆಳಕೆರೆ ಪಿಕಪ್ ಡ್ಯಾಂನಿಂದ ಬ್ಯಾಲದಹಳ್ಳಿ ಹಳ್ಳಕ್ಕೆ ನೀರು ಹರಿಸಿ

ದೇವರಬೆಳಕೆರೆ ಪಿಕಪ್ ಡ್ಯಾಂನಿಂದ ಬ್ಯಾಲದಹಳ್ಳಿ ಹಳ್ಳಕ್ಕೆ ನೀರು ಹರಿಸಿ

ಜಿಲ್ಲಾಧಿಕಾರಿಗಳಿಗೆ ತೋಟಗಳ ರೈತರ ಮನವಿ

ಮಲೇಬೆನ್ನೂರು, ಫೆ.28- ದೇವರಬೆಳಕೆರೆ ಪಿಕಪ್ ಡ್ಯಾಂನಿಂದ ಬ್ಯಾಲದಹಳ್ಳಿ ಹಳ್ಳಕ್ಕೆ ನೀರು ಹರಿಸುವಂತೆ ಒತ್ತಾಯಿಸಿ, ದೇವರಬೆಳಕೆರೆ, ಕುಣೆಬೆಳಕೆರೆ, ಕಡ್ಲೆಗೊಂದಿ, ಸಲಗನಹಳ್ಳಿ, ಹನಗವಾಡಿ, ಹರಗನಹಳ್ಳಿ, ರಾಮತೀರ್ಥ ಗ್ರಾಮಗಳ ನೂರಾರು ರೈತರು ಬುಧವಾರ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬ್ಯಾಲದಹಳ್ಳಿ ಹಳ್ಳ ನೀರಿಲ್ಲದೇ ಬತ್ತಿ ಬರಿದಾಗಿದ್ದು, ಹತ್ತಾರು ಹಳ್ಳಿಗಳ ಸಾವಿರಾರು ತೋಟಗಳಿಗೆ ತೊಂದರೆ ಆಗಿದೆ. ಆದ್ದರಿಂದ ತಕ್ಷಣ ದೇವರಬೆಳಕೆರೆ ಪಿಕಪ್ ಡ್ಯಾಂನ ಸ್ಕವರಿಂಗ್ ಸ್ಲೂಯಿಸ್ ಗೇಟ್ ಮೂಲಕ ಹಳ್ಳಕ್ಕೆ ನೀರು ಹರಿಸುವಂತೆ ರೈತರು ಜಿಲ್ಲಾಧಿಕಾರಿಗಳು ತಿಳಿಸಿದರು.

ರೈತರ ಮನವಿಗೆ ಪೂರಕ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು, ಭದ್ರಾ ಇಂಜಿನಿಯರ್‌ಗಳ ಜೊತೆ ಚರ್ಚಿಸಿ ನೀರು ಹರಿಸುವ ಭರವಸೆ ನೀಡಿದರು. ಭದ್ರಾ ಅಚ್ಚುಕಟ್ಟಿನ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ, ಕಡ್ಲೆಗೊಂದಿಯ ಎ.ಹನುಮಂತರೆಡ್ಡಿ, ರಾಮಚಂದ್ರಪ್ಪ, ಬೀರಪ್ಪ, ಕುಣೆಬೆಳಕೆರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ್, ಮಡಿವಾಳರ ಮಲ್ಲೇಶಪ್ಪ, ಅಂಜಿನಪ್ಪ, ಕರಿಬಸಪ್ಪ, ಹರೀಶ್, ಬೀರಪ್ಪ, ಕೆ.ಬೇವಿನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಲಗನಹಳ್ಳಿ ಮಂಜಪ್ಪ, ಹರಗನಹಳ್ಳಿಯ ಮಂಜುನಾಥ್, ವಿಶ್ವನಾಥ್ ಸೇರಿದಂತೆ ಇನ್ನೂ ಅನೇಕ ರೈತರು ಈ ವೇಳೆ ಹಾಜರಿದ್ದರು.

error: Content is protected !!