ದಾವಣಗೆರೆ, ಫೆ. 27 – ಮಾಯಕೊಂಡ ಮಂಡಲದ ಯುವ ಮೋರ್ಚಾ ಸಭೆಯು ರಾಜ್ಯ ಯುವ ಮೋರ್ಚಾ ಘಟಕದ ಆದೇಶದ ಮೇರೆಗೆ ನಮೋ ಯುವ ಭಾರತ ಮತ್ತು ಯುವ ಚೌಪಲ್ ಅಭಿಯಾನದ ಕುರಿತು ಪಕ್ಷದ ಕಛೇರಿಯಲ್ಲಿ ಇಂದು ಚರ್ಚಿಸಲಾಯಿತು.
ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಸಲುವಾಗಿ, ಯುವ ಮೋರ್ಚಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾಯಕೊಂಡ ಮಂಡಲದ ಅಧ್ಯಕ್ಷ ದೇವಂದ್ರಪ್ಪ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ.ಎಸ್ ಶ್ಯಾಮ್, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಣಬೇರು ಜೀವನ್ ಮೂರ್ತಿ, ಮಾಯಕೊಂಡ ಮಂಡಲದ ಮಾಜಿ ಅಧ್ಯಕ್ಷ ಅನಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್, ರೈತ ಮೋರ್ಚಾ ಕೋಶಾಧ್ಯಕ್ಷ ಗುಡ್ಡೇಶ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಮಂಡಲ ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಅಣ ಬೇರು ನಂದಕುಮಾರ್ ಇತರರು ಉಪಸ್ಥಿತರಿದ್ದರು.