ಸರ್ವಜ್ಞನ ತ್ರಿಪದಿಗಳಲ್ಲಿ ವಿಶ್ವಮಾನವ ಸಂದೇಶವಿದೆ

ಸರ್ವಜ್ಞನ ತ್ರಿಪದಿಗಳಲ್ಲಿ ವಿಶ್ವಮಾನವ ಸಂದೇಶವಿದೆ

ದಾವಣಗೆರೆ, ಫೆ.27- ವಿಶ್ವಮಾನವ ಸಂದೇಶ ಹಾಗೂ ಜೀವನದ ಮೌಲ್ಯಗಳು  ಸರ್ವಜ್ಞನ  ತ್ರಿಪದಿ ಗಳಲ್ಲಿ ಇವೆ ಎಂದು  ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್‍ಭಾನು ಎಸ್. ಬಳ್ಳಾರಿ ತಿಳಿಸಿದರು.

ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದಲ್ಲಿ ನಡೆದ ಕಾಯಕ ಶರಣರ ದಿನಾಚರಣೆ ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಸರ್ವಜ್ಞ ಸತ್ಯ, ಶುದ್ಧವಾದ ಕಾಯಕವನ್ನು ಮಾಡುತ್ತಾ ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಗಳ ಮೂಲಕ ತಿದ್ದುವಲ್ಲಿ  ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶರಣರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ. ಇವರನ್ನು ಪಂಚ ತಜ್ಞರು ಎಂದು ಕರೆಯುತ್ತಾರೆ, ಇವರು ನಿಜವಾದ  ಕಾಯಕ ಜೀವಿಗಳು ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕವೇ ಕೈಲಾಸ, ಯಾವುದೇ ಒಂದು ಕಾಯಕ ಸಣ್ಣದು, ದೊಡ್ಡದು ಇಲ್ಲ, ಕಾಯಕದಲ್ಲಿ ನಮಗೆ ನಂಬಿಕೆ ಮತ್ತು ವಿಶ್ವಾಸ ಇರಬೇಕು. ಅದೇ ಅಂತರಂಗ ಶುದ್ದಿ, ಅದೇ ಬಹಿರಂಗ ಶುದ್ದಿ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯಕ್,  ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ, ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ.ಎಚ್. ವಿಶ್ವನಾಥ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!