ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಸಮಾನತೆಯ ಹರಿಕಾರರು

ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಸಮಾನತೆಯ ಹರಿಕಾರರು

ಮಲೇಬೆನ್ನೂರಿನಲ್ಲಿ ಡಾ. ಬಿ. ಚಂದ್ರಶೇಖರ್ ಅಭಿಮತ

ಮಲೇಬೆನ್ನೂರು, ಫೆ. 27- ಇಲ್ಲಿನ ಶಿವ ವಿವಿಧೋದ್ದೇಶ ಸಹಕಾರ ಸಂಘದ ಕಛೇರಿಯಲ್ಲಿ ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರವನ್ನು ಮಂಗಳವಾರ ಅನಾವರಣಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್ ಅವರು, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರು ತಮ್ಮ ವಿಶೇಷವಾದ ವಿಚಾರಧಾರೆಗಳಿಂದಾಗಿ ವಿಶ್ವದ ಗಮನ ಸೆಳೆದಿದ್ದಾರೆ. ಎಲ್ಲಾ ಜಾತಿ, ಧರ್ಮಗಳನ್ನು ಸಮಾನವಾಗಿ ಗೌರವಿಸುವುದನ್ನು ಬಸವಣ್ಣ 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ತೋರಿಸಿಕೊಟ್ಟಿದ್ದಾರೆ.

ಅಂಬೇಡ್ಕರ್ ಅವರು ಸಂವಿಧಾನ ಮೂಲಕ ದೇಶದ ಎಲ್ಲಾ ಜನತೆಗೆ ಸಮಾನ ಹಕ್ಕುಗಳನ್ನು ನೀಡಿದ್ದಾರೆ. ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ನಾವು ಸದಾ ಸ್ಮರಿಸಬೇಕು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗೌರವಿಸಿರುವ ರಾಜ್ಯ ಸರ್ಕಾರವನ್ನು ಡಾ. ಬಿ. ಚಂದ್ರಶೇಖರ್ ಅಭಿನಂದಿಸಿದರು.

ಸಂಘದ ನಿರ್ದೇಶಕ ಹೆಚ್.ಜಿ. ಚಂದ್ರಶೇಖರ್ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಕ್ರಾಂತಿಕಾರಿ ಬದಲಾವಣೆಗಳಿಂದಾಗಿ ನಮ್ಮ ನಾಡಿನಲ್ಲಿ ಸಮಾನತೆ ಜಾರಿಗೆ ಬರಲು ಸಾಧ್ಯವಾಯಿತೆಂದರು.

ಸಂಘದ ಉಪಾಧ್ಯಕ್ಷ ಯಲವಟ್ಟಿ ಆಂಜನೇಯ, ನಿರ್ದೇಶಕರಾದ ವಕೀಲ ಹೆಚ್.ಬಿ. ಶಿವಕುಮಾರ್, ಶ್ರೀಮತಿ ಸರೋಜಮ್ಮ ಭರಮಗೌಡ, ಕೊಕ್ಕನೂರು ರಮೇಶ್, ಹುಲ್ಲುಮನಿ ಷಣ್ಮುಖಪ್ಪ, ಜಿಗಳಿ ಪ್ರಕಾಶ್, ಕಾರ್ಯದರ್ಶಿ ಜಿ.ಎಂ. ನಳಿನ, ಸಿಬ್ಬಂದಿಗಳಾದ ಬೆಣ್ಣೆಹಳ್ಳಿ ವಿಜಯ್, ಕೆ.ಜಿ.ಅಕ್ಷತ, ನಿಟ್ಟೂರು ಹನುಮಂತಪ್ಪ, ಕುಂಬಳೂರು ಶಂಭು, ಚಂದನಾ, ಪಿಗ್ಮಿ ಸಂಗ್ರಹಕಾರರಾದ ಸಿರಿಗೆರೆ ನಾಗರಾಜ್, ಕುಂಬಳೂರಿನ ಎಸ್. ಮಂಜುನಾಥ್, ಕೊಕ್ಕನೂರು ಆಂಜನೇಯ, ಹನಗವಾಡಿ ಮಹೇಶ್, ಬೆಳ್ಳೂಡಿ ವಿಜಯ್, ಬೆಳ್ಳೂಡಿ ಬಸವನಗೌಡ, ಎಳೆಹೊಳೆ ರವಿ, ಸಿರಿಗೆರೆ ರಾಜು, ಉಕ್ಕಡಗಾತ್ರಿ ಚಂದ್ರಶೇಖರ್, ರಾಜನಹಳ್ಳಿ ಸತೀಶ್,ಉಕ್ಕಡಗಾತ್ರಿ ರಾಮನಗೌಡ, ಮಲ್ಲನಾಯ್ಕನಹಳ್ಳಿ ಲೋಹಿತ್ ಹಾಗೂ ಗ್ರಾಹಕರು ಈ ವೇಳೆ ಹಾಜರಿದ್ದರು.

error: Content is protected !!