ಹರಿಹರದಲ್ಲಿ ಆರೋಗ್ಯ ತಪಾಸಣೆ ಶಿಬಿರ

ಹರಿಹರದಲ್ಲಿ ಆರೋಗ್ಯ ತಪಾಸಣೆ ಶಿಬಿರ

ಹರಿಹರ ಫೆ,26- ದಾವಣಗೆರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ  ಐ.ಸಿ.ಟಿ.ಸಿ. ವಿಭಾಗ ಮತ್ತು ದಾವಣಗೆರೆ ದುರ್ಗಾ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಬಸವರಾಜ್, ವಿನೋದ್ ಕುಮಾರ್, ಜಗದೀಶ್ ಡಿ.ಎಸ್. ಟಿಪ್ಪು ಸುಲ್ತಾನ್, ವಿಜಯಮ್ಮ, ಶಾಂತಿಬಾಯಿ, ಶೋಭಾ, ಶಿಲ್ಪಾ, ರೂಪಾ, ರಂಗನಾಥ, ಮಂಜುನಾಥ್ ಇತರರು ಹಾಜರಿದ್ದರು.

error: Content is protected !!