ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಎಲ್ಲರೂ ಶ್ರಮಿಸಿ

ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಎಲ್ಲರೂ ಶ್ರಮಿಸಿ

ಹರಪನಹಳ್ಳಿ ಮತ್ತು ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಶಾಸಕರಾದ  ಎಂ.ಪಿ.ಲತಾ ಮಲ್ಲಿಕಾರ್ಜುನ್ ಕರೆ

ಹರಪನಹಳ್ಳಿ, ಫೆ.25- ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಎಲ್ಲರೂ ಶ್ರಮಿಸಬೇಕು  ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ  ಹಳೇಬಸ್ ನಿಲ್ದಾಣದಲ್ಲಿ ಹರಪನಹಳ್ಳಿ ಮತ್ತು ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಕಾಂಗ್ರೆಸ್ ಪಕ್ಷ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಬಿಜೆಪಿ ಐದು ಗ್ಯಾರಂಟಿಗಳನ್ನು ನೀಡಿ, ರಾಜ್ಯವನ್ನು ದಿವಾಳಿ ಮಾಡುತ್ತದೆ ಎಂದು ನುಡಿದ ಬಿಜೆಪಿಯವರಿಗೆ   ಕಾಂಗ್ರೆಸ್ ಯಶಸ್ವಿಯಾಗಿ ಐದು ಗ್ಯಾರಂಟಿ ಗಳನ್ನು ನೀಡಿ, ದೇಶದಲ್ಲೇ ಮಾದರಿ ರಾಜ್ಯವಾಗಿ ಹೆಸರು ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದರು. 

ಹರಪನಹಳ್ಳಿ ತಾಲ್ಲೂಕಿಗೆ 200 ಕೋಟಿ ಅನುದಾನ ಬಂದಿದ್ದು, ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡಗಳು ಸೇರಿದಂತೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ  ಶ್ರಮಿಸುತ್ತೇನೆ ಎಂದು ಲತಾ ಭರವಸೆ ನೀಡಿದರು. 

ವಿಜಯ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಸಿರಾಜ್ ಶೇಖ್  ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ ಧರ್ಮ – ಧರ್ಮಗಳ, ಜಾತಿ – ಜಾತಿಗಳ ನಡುವೆ ಕಿತ್ತಾಟ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ ಪಕ್ಷದ ಕಾರ್ಯಕರ್ತರೇ ಪಕ್ಷದ ಆಸ್ತಿ ಎಂದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ,ಮೋದಿ ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಣಯಗಳಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬರುವ ಲೋಕಸಭೆ ಚುನಾವಣೆಯಲ್ಲಿ ಜನತೆಯೇ ಇದಕ್ಕೆ ಉತ್ತರಿಸಲಿದ್ದಾರೆ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಯನ್ನು ಜನರ ಮುಂದಿಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು. 

ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂವಿ ಅಂಜಿನಪ್ಪ ಮಾತನಾಡಿ,  ನೀವು ಕೊಟ್ಟ ಅಧಿಕಾರವನ್ನು ನಾನು ಸರ್ಮಪಕ ರೀತಿಯಲ್ಲಿ  ಕೆಲಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದರು.

ವಿಜಯ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಸಿರಾಜ್ ಶೇಖ್,  ದಾವಣಗೆರೆ ಜಿಲ್ಲಾ ಕಾಂಗ್ರೆಸ್   ಅಧ್ಯಕ್ಷ ಎಚ್.ಬಿ.ಮಂಜಪ್ಪ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ಎಂ.ವಿ.ಅಂಜಿನಪ್ಪ  ಹಾಗೂ ಚಿಗಟೇರಿ ಕುಬೇರ್ ಗೌಡ  ಅವರಿಗೆ  ಕಾಂಗ್ರೆಸ್ ಪಕ್ಷದ ಬಾವುಟ ನೀಡಿ  ಶುಭ ಹಾರೈಸಿದರು.

ಮುಖಂಡರಾದ ಸಿ.ಚಂದ್ರಶೇಖರ ಭಟ್ಟ,  ಪಿ.ಮಹಾಬಲೇಶ್ವರಗೌಡ ಮಾತನಾಡಿದರು.

ಕೆಪಿಸಿಸಿ ಮಾಜಿ ಸದಸ್ಯ ಡಿ.ಬಸವರಾಜ್, ಮುಖಂಡರಾದ ಎಂ.ರಾಜಶೇಖರ, ಡಾ.ಬಿದ್ರಿ ಕೊಟ್ರೇಶ, ವೈ.ಕೆ.ಬಿ.ದುರುಗಪ್ಪ, ಡಿ.ರೆಹಮಾನ್ ಸಾಬ್, ಆಲದಹಳ್ಳಿ ಷಣ್ಮುಖಪ್ಪ, ಕೆ.ಎಂ.ಬಸವರಾಜಯ್ಯ, ಎಂ.ಅಜ್ಜಣ್ಣ, ಸಿ.ಜಾವೀದ್, ಬಿ.ನಜೀರ್, ತೆಲಗಿ ಈಶಪ್ಪ, ಪಂಡಿತ್ ಡಾ.ಬಿ.ಹೊಸರಪ್ಪ, ಬಿ.ಕೆ.ಪ್ರಕಾಶ, ಗುಂಡಗತ್ತಿ ಕೊಟ್ರಪ್ಪ, ಕಂಚಿಕೇರಿ ಜಯಲಕ್ಷ್ಮಿ, ಭಾಗ್ಯಮ್ಮ ಮಲ್ಲಿಕಾರ್ಜುನ, ಹೆಚ್.ಟಿ.ವನಜಾಕ್ಷಮ್ಮ, ಬಾಣದ ಅಂಜಿನಪ್ಪ, ಟಿ.ಉಮಾಕಾಂತ, ಮುದಗಲ್ ಗುರುನಾಥ,  ಹಿರೆಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ, ನಿಚ್ಚವನಹಳ್ಳಿ ಪರಶುರಾಮಪ್ಪ. ಶಿಂಗ್ರಿಹಳ್ಳಿ ಬಸವರಾಜ್, ಬಸವರಾಜ ಹುಲಿಯಪ್ಪನವರ್, ಟಿ.ಹೆಚ್.ಎಂ. ಮಂಜುನಾಥ, ಜಾಕೀರ್ ಹುಸೇನ್, ಟಿ.ವೆಂಕಟೇಶ. ಹೆಚ್.ಕೊಟ್ರೇಶ್‌, ಹೆಚ್.ವಸಂತಪ್ಪ ಸೇರಿದಂತೆ ಇತರರು ಇದ್ದರು.

error: Content is protected !!