ವಿಶ್ವಚಿಂತನಾ ಮತ್ತು ವಿಶ್ವ ಭ್ರಾತೃತ್ವ ದಿನಾಚರಣೆ ನಗರದಲ್ಲಿ ಸ್ಕೌಟ್ – ಗೈಡ್ಸ್‌ ವಿದ್ಯಾರ್ಥಿಗಳ ರ‍್ಯಾಲಿ

ವಿಶ್ವಚಿಂತನಾ ಮತ್ತು ವಿಶ್ವ ಭ್ರಾತೃತ್ವ ದಿನಾಚರಣೆ  ನಗರದಲ್ಲಿ ಸ್ಕೌಟ್ – ಗೈಡ್ಸ್‌ ವಿದ್ಯಾರ್ಥಿಗಳ ರ‍್ಯಾಲಿ

 ದಾವಣಗೆರೆ, ಫೆ. 25- ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಇಂದು ರಾಲಿ ನಡೆಸಿದರು.  ಮಕ್ಕಳು ಬ್ಯಾಂಡ್ ಸಮೇತ ಉದ್ಘೋಷಗಳ ಮೂಲಕ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಸ್ಕೌಟ್ ಗೈಡ್ಸ್‌, ಕಬ್, ಬುಲ್ ಬುಲ್ ಮಕ್ಕಳಿಗೆ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಅವರು  ಬೇಡನ್ ಪೊವೆಲ್ ಹಾಗೂ ಲೇಡಿ ಬೇಡನ್ ಪೊವೆಲ್‌  ಚಳವಳಿಯ ಬಗ್ಗೆ ಮಾತನಾಡಿ, ಜನುಮ ದಿನದ ಶುಭ ಕೋರಿ, ಮಕ್ಕಳಿಗೆ ಇಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಎ.ಡಿ.ಸಿ ರೇಖಾರಾಣಿ    ರಾಲಿಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಬೇಡನ್ ಪೊವೆಲ್ ಹಾಗೂ ಪ್ರಕೃತಿ ಸೌಂದರ್ಯದ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು,

 ಜಿಲ್ಲಾ ಸಂಸ್ಥೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಸ್ಕೌಟ್‌ನಿಂದ ಗಿರೀಶ್‌ ಎಸ್.‌ ಪ್ರಥಮ, ಗೈಡ್ಸ್‌ನಿಂದ ಓಜಸ್ವಿನಿ ದ್ವಿತೀಯ, ಕಬ್‌ ವಿಭಾಗದಿಂದ ತೇಜಸ್ವಿ ನಾಯಕ ದ್ವಿತೀಯ, ಆರ್.‌ ಶ್ರೀಧರ್ ತೃತೀಯ ಬಹುಮಾನ ಪಡೆದರು. 

ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಖಜಾಂಚಿ ಶ್ರೀಮತಿ ಗಾಯತ್ರಿ ಚಿಮ್ಮಡ್, ಸ್ಕೌಟ್ ಮಾಸ್ಟರ್ ಶ್ರೀನಿವಾಸ್, ದುಗ್ಗಪ್ಪ, ಲೇಡಿ ಸ್ಕೌಟ್ ಮಾಸ್ಟರ್  ಆರೋಗ್ಯಮ್ಮ, ವಾಹಿದ್, ಕಬ್ ಮಾಸ್ಟರ್  ನೀಲಮ್ಮ, ಮಂಗಳ, ಗೈಡ್ ಕ್ಯಾಪ್ಟನ್ಸ್ ವೇದಾವತಿ, ಮಂಜುಳಾ, ಸುನೀತಾ ಹಾಗೂ ಕಾರ್ಯದರ್ಶಿ ಎಂ.ಸಿ. ಮಹೇಶ್ ಇವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

error: Content is protected !!