ಕೆಪಿಎಸ್ ಕೈಬಿಟ್ಟು ಸರ್ಕಾರಿ ಶಾಲೆಗಳ ಉಳುವಿಗೆ ಎಲ್‌ಕೆಜಿ ಶಿಕ್ಷಕಿಯರಿಗೆ ಆದ್ಯತೆ ನೀಡಿ

ಕೆಪಿಎಸ್ ಕೈಬಿಟ್ಟು ಸರ್ಕಾರಿ ಶಾಲೆಗಳ ಉಳುವಿಗೆ ಎಲ್‌ಕೆಜಿ ಶಿಕ್ಷಕಿಯರಿಗೆ ಆದ್ಯತೆ ನೀಡಿ

ಹೊನ್ನಾಳಿ, ಫೆ. 25- ರಾಜ್ಯ ಸರ್ಕಾರವು ಹೊಸದಾಗಿ 1000 ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯುವುದಕ್ಕೆ ಮುಂದಾಗಿರುವುದನ್ನು ಕೈಬಿಟ್ಟು, ಈಗಾಗಲೇ ಸರ್ಕಾರಿ ಶಾಲೆಯಲ್ಲಿ 2015-16 ರಿಂದ ಆರ್‌ಟಿಇ ಪ್ರಕಾರ ಎಲ್‌ಕೆಜಿ, ಯುಕೆಜಿ ವ್ಯವಸ್ಥಿತವಾಗಿ ನಡೆಸುತ್ತಿ ರುವ ಶಿಕ್ಷಕಿಯರಿಗೆ ಆದ್ಯತೆ ನೀಡುವುದರ ಮೂಲಕ ಗೌರವ ಸಂಬಳ, ಅಲ್ಲಿ ವಿದ್ಯಾರ್ಥಿ ಗಳಿಗೆ  ಪೌಷ್ಟಿಕ ಆಹಾರ, ಪುಸ್ತಕ, ಶಾಲೆಗೆ ಒಬ್ಬರಂತೆ ಆಯಾಗಳ ನೇಮಕ ಕಲ್ಪಿಸಿದ್ದೇ ಆದಲ್ಲಿ ಸರ್ಕಾರಿ ಶಾಲೆಗಳು ಉಳಿಯಲು ಹೆಚ್ಚು ಸಹಕಾರಿಯಾಗಲಿದೆ ಎಂದು ಶಾಲಾಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಮೋಹಿದ್ದೀನ್ ಕುಟ್ಟೆ ಅಭಿಪ್ರಾಯ ವ್ಯಕ್ತಪಡಿಸಿದರು.

ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ದಾವಣಗೆರೆ-ಚಿತ್ರದುರ್ಗ-ಶಿವಮೊಗ್ಗ ಜಿಲ್ಲೆಗಳ ಎಲ್‌ಕೆಜಿ, ಯುಕೆಜಿ ಶಿಕ್ಷಕಿಯರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಎಸ್‌ಡಿಎಂಸಿ ವತಿಯಿಂದ ಪೂರ್ವ ಪ್ರಾಥಮಿಕ ಹಾಗೂ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಿರುವುದು ತಿಳಿದ ವಿಷಯ ವಾಗಿದೆ. ಸರ್ಕಾರಿ ಶಾಲೆ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಸರ್ಕಾರ ಇದನ್ನು ಮನಗಂಡು ರಾಜ್ಯದ ಸಾವಿರಾರು ಶಿಕ್ಷಕಿಯರಿಗೆ ಗೌರವಧನ ನೀಡುವಂತಾಗಲಿ ಎಂದು ಒತ್ತಾಯಿಸಿದರು.

ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಶಿವಲಿಂಗಪ್ಪ ಮಾತನಾಡಿ, ರಾಜ್ಯದಲ್ಲಿ ಈ ರೀತಿ ಕರ್ವವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ 2019-20 ರಲ್ಲಿ ಸರ್ಕಾರವೇ ತರಬೇತಿ ನೀಡಿತ್ತು. ಶಿಕ್ಷಣ ಇಲಾಖೆಯಿಂದಲೇ ಎನ್‌ಟಿಸಿ ಹಾಗೂ ಸಿಸಿಇ ತರಬೇತಿಗಳನ್ನು ನೀಡಿ ಎಲ್‌ಕೆಜಿ ಶಾಲೆಗಳನ್ನು ತೆರೆಯಲು ಪರವಾನಿಗೆ ನೀಡಿತ್ತು.

ಸರ್ಕಾರ ಸಂಬಳ ಇತ್ಯಾದಿ ಸೌಲಭ್ಯಗಳ ನೀಡಲು ಮುಂದಾಗಿಲ್ಲ. ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳಲ್ಲಿ 67 ಶಾಲೆಗಳಲ್ಲಿ ಈ ರೀತಿಯ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಿಕ್ಷಕಿಯರಿಗೆ ಪೋಷಕರು ಹಾಗೂ ಎಸ್‌ಡಿಎಂಸಿ ಯೇ ಸರ್ಕಾರಿ ಶಾಲೆಗಳ ಉಳುವಿಗಾಗಿ ಸಂಬಳ ನೀಡುತ್ತಾ ಬರುತ್ತಿದೆ. ಈ ಕಾರಣ ಸರ್ಕಾರ ಕೆಪಿಎಸ್‌ ಶಾಲೆ ಆರಂಭಿಸದಿರುವಂತೆ ಮನವಿ ಮಾಡಿದರು.

ಈ ವಿಷಯವಾಗಿ 10 ದಿನಗಳೊಳಗಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ನೀಡಿ, ಒತ್ತಾಯಿಸಲಾಗುವುದೆಂದರು.

ಎಸ್‌ಡಿಎಂಸಿ ರಾಜ್ಯ ಸ.ಕಾ. ರುದ್ರನಾಯ್ಕ, ದಾವಣಗೆರೆ ಜಿಲ್ಲಾಧ್ಯಕ್ಷ ಅಂಜಿನಪ್ಪ, ನ್ಯಾಮತಿ ಅಧ್ಯಕ್ಷ ರಾಜಶೇಖರ, ಕಾರ್ಯದರ್ಶಿ ಸತೀಶ್, ಗ್ರಾ.ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷೆ ಶ್ವೇತಾ ಬಸವರಾಜ್‌, ಮಹಾ ಒಕ್ಕೂಟದ ರಾಜ್ಯ
ಸ. ಕಾರ್ಯದರ್ಶಿ ರೇಖಾ, ಶಿಕ್ಷಕಿಯರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷರಾದ ರೂಪ ಆನಗೋಡು, ಕಾರ್ಯದರ್ಶಿ ಶಿಲ್ಪಾ, ಶಿವಮೊಗ್ಗ ಅಧ್ಯಕ್ಷೆ ಶಾಕೀರಬಾನು, ಕಾರ್ಯದರ್ಶಿ ನಗೀನಾ ಬಾನು ಸೇರಿದಂತೆ ಮೂರು ಜಿಲ್ಲೆಗಳ ಮೂವತ್ತಕ್ಕೂ ಹೆಚ್ಚು ಶಿಕ್ಷಕಿಯರು ಪಾಲ್ಗೊಂಡಿದ್ದರು. 

error: Content is protected !!