ದಾವಣಗೆರೆ, ಫೆ. 25 – ಸ್ಥಳೀಯ ಶ್ರೀ ರಾಮ ಭಕ್ತರು ಚಿತ್ರದುರ್ಗ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ಇಂದು ಪ್ರಯಾಣ ಬೆಳಸಿದ್ದು, ರೈಲಿನಲ್ಲಿ ಮಹಿಳೆಯರು ರಾಮನ ಭಜನೆ ನಡೆಸಿದರು.
ಪುಷ್ಪ ವಾಲಿ ಭಾಗ್ಯ ಪಿಸಾಳೆ, ಬಿಜೆಪಿ ಮಹಿಳಾ ಮೊರ್ಚಾ ಪ್ರಧಾನ ಕಾರ್ಯದರ್ಶಿ ಶಾಂತ ದೊರೈ, ಶುಭ ಐನಳ್ಳಿ, ರತ್ನಮ್ಮ, ಸುನಂದ, ಸುಮ ಮಲ್ಲಿಕಾರ್ಜುನ, ರೇಖಾ ಓಂಕಾರಪ್ಪ, ಮಂಜುಳ, ಇಂದ್ರ, ಮಮತ, ಶಾಂತ, ಶಂಕುತಲಮ್ಮ, ಸುನೀತಾ, ರೂಪ ಕಾಟ್ವೆ, ಸಂತೋಷಿ, ಮಂಜುನಾಥ್, ರಾಕೇಶ್ ಸೇರಿದಂತೆ ಅನೇಕ ರಾಮ ಭಕ್ತರು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.