ಹಿಮೋಫಿಲಿಯಾ ಸೊಸೈಟಿಯಿಂದ `ರೇಸ್ ಫಾರ್ 7′

ಹಿಮೋಫಿಲಿಯಾ ಸೊಸೈಟಿಯಿಂದ `ರೇಸ್ ಫಾರ್ 7′

ದಾವಣಗೆರೆ, ಫೆ.25- ನಗರದಲ್ಲಿನ ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ವತಿಯಿಂದ  ಇಂದು `ರೇಸ್ ಫಾರ್ 7′ ಶೀರ್ಷಿಕೆಯಡಿ 7 ಕೀ.ಮಿ ಮ್ಯಾರಥಾನ್ ಆಯೋಜಿಸಿ, ಅಂತರಾಷ್ಟ್ರೀಯ ವಿರಳ ರೋಗಗಳ ದಿನಾಚರಣೆಯಾಗಿ ಆಚರಿಸಲಾಯಿತು. 

ವಿರಳ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಗನೈಸೇಷನ್ ಫಾರ್ ರೇರ್ ಡಿಸಿಸ್ ಇಂಡಿಯಾ (ಒಆರ್‍ಡಿಐ), ಪ್ರತಿ ವರ್ಷ ಫೆಬ್ರವರಿ ತಿಂಗಳಿನ ಕೊನೆಯ ದಿನದಂದು  ಅಂತರಾಷ್ಟ್ರೀಯ ವಿರಳ ರೋಗಗಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ನಗರದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. 150 ಕ್ಕು ಹೆಚ್ಚು ಜನರು ಜಾಥದಲ್ಲಿ  ಭಾಗವಹಿಸಿದ್ದರು. 

ಖ್ಯಾತ ಉದ್ಯಮಿಗಳಾದ ದೀಪಾ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. 

ಮುಖ್ಯ ಅಥಿತಿಗಳಾಗಿ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಹನಗವಾಡಿ ವೀರೇಶ್, ಡಿಹೆಚ್‌ಒ ಡಾ. ಷಣ್ಮುಖಪ್ಪ, ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಎಂ.ಬಿ. ನಾಗೇಂದ್ರಪ್ಪ,  ಡಾ. ಮೂಗನ ಗೌಡ,  ಡಾ. ಮೃತ್ಯುಂಜಯ ಹಿರೇಮಠ್, ಡಾ. ಬಿ.ಟಿ.ಅಚ್ಯುತ್, ರವಿನಾರಾಯಣ್ ಉಪಸ್ಥಿತರಿದ್ದರು. ಡಾ. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.

error: Content is protected !!