ದಾವಣಗೆರೆ, ಫೆ.23- ನಗರದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ನಿನ್ನೆ ಅಜ್ಜ – ಅಜ್ಜಿಯಂದಿರ ದಿನಾಚರಣೆ ನಡೆಯಿತು.
ಶ್ರೀಮತಿ ನಾನ್ಸಿ ಫರ್ನಾಂಡಿಸ್ ಮತ್ತು ಲಾರೆನ್ಸ್ ಗೇಮ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾಂಶುಪಾಲರಾದ ಜೈರಾಮ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳ ನಂತರ ಅಜ್ಜ – ಅಜ್ಜಿಯಂದಿರಿಗಾಗಿಯೇ ಆಟೋಟಗಳನ್ನು ಆಯೋಜಿಸಲಾಗಿತ್ತು.
ಶಿಕ್ಷಕ ವೀರಭದ್ರ ನಾಯಕ್ ಅವರುಗಳು ಉಪಸ್ಥಿತರಿದ್ದರು. ಶಿಕ್ಷಕ ಉಪೇಂದ್ರ ಕುಮಾರ್ ವಂದಿಸಿದರು. ಚೇತನ ಅವರು ಸರಸ್ವತಿ ವಂದನ ಗೀತೆ ಹಾಡಿದರು. ಶ್ರೀಮತಿ ಮೋಸಮಿ, ಪ್ರೀತಿ ಕುಮಾರಿ ಅವರುಗಳು ನಿರೂಪಿಸಿದರು.