ದೇಶ, ಸಂವಿಧಾನ ಉಳಿಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು

ದೇಶ, ಸಂವಿಧಾನ ಉಳಿಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು

ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕೆಪಿಸಿಸಿ ವೀಕ್ಷಕ ಪಿ. ಆರ್ ರಮೇಶ್

 ದಾವಣಗೆರೆ,ಫೆ.23-  ದೇಶ ಹಾಗೂ ಸಂವಿಧಾನ ಉಳಿಯಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಕೆಪಿಸಿಸಿ ವೀಕ್ಷಕ   ಪಿ. ಆರ್  ರಮೇಶ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್‌ನ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು  ಹಾಗೂ  ಕಾಂಗ್ರೆಸ್ ಮುಖಂಡರುಗಳ ಸಭೆಯಲ್ಲಿ  ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ಜಿಲ್ಲೆಯ ಏಳು ವಿಧಾನಸಭೆ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ರಚನೆ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. 

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಂವಿಧಾನದ 73, 74ಕ್ಕೆನೇ ತಿದ್ದುಪಡಿ ತಂದ ಪರಿಣಾಮ ಇಂದು ಶ್ರೀ ಸಾಮಾನ್ಯನೂ ಕೂಡ ಉನ್ನತ ಹುದ್ದೆಗೆ ಏರಲು ಸಾಧ್ಯವಾಗಿದೆ ಎಂದು ತಿಳಿಸಿದರು 

ಕೆಪಿಸಿಸಿ ಉಸ್ತುವಾರಿ ಡಿ.ಬಸವರಾಜ್ ಮಾತನಾಡಿ,    ಬರಲಿರುವ  ದಾವಣಗೆರೆ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಶತಸಿದ್ಧ. ಅದಕ್ಕಾಗಿ ಶ್ರಮಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ  ಮಾತನಾಡಿ, ಆದಷ್ಟು ಬೇಗನೆ ದಾವಣಗೆರೆ ಲೋಕಸಭೆ ವ್ಯಾಪ್ತಿಯ ಎಲ್ಲಾ ಬೂತ್‌ಗಳ ಪ್ರತಿನಿಧಿ ಗಳನ್ನು ನೇಮಿಸಬೇಕೆಂದು ಬ್ಲಾಕ್ ಅಧ್ಯಕ್ಷರುಗಳಲ್ಲಿ ವಿನಂತಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಳಾದ    ಕೆ. ಜಿ. ಶಿವ ಕುಮಾರ್,  ಮಲೇಬೆನ್ನೂರು  ಅಭಿದ್ ಅಲಿ, ಹರಪನಹಳ್ಳಿ ಎಂ. ವಿ  ಅಂಜಿನಪ್ಪ, ಚನ್ನಗಿರಿ ಶ್ರೀನಿವಾಸ್,    ಮಾಗಾನಹಳ್ಳಿ ಪರಶುರಾಮ್, ಜಗಳೂರಿನ ಶಂಷೀರ್ ಅಲಿ, ಹೊನ್ನಾಳಿ  ಶಿವಯೋಗಿ, ಸಾಸ್ವೆಹಳ್ಳಿ ಆರ್. ನಾಗಪ್ಪ, ಸಂತೆಬೆನ್ನೂರಿನ ಮೊಹ್ಮದ್ ಜಬೀಉಲ್ಲಾ, ಹರಿಹರದ ಎಲ್. ಬಿ. ಹನುಮಂತಪ್ಪ, ಜಿಲ್ಲಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಾದ ಕೆ. ಎಂ. ಮಂಜುನಾಥ್, ಡೋಲಿ ಚಂದ್ರು, ನಂಜಾನಾಯ್ಕ್, ಬಿ. ಎನ್. ವಿನಾಯಕ, ಲಿಯಾಖತ್ ಅಲಿ, ರುದ್ರೇಶ್, ಸಮಿಉಲ್ಲಾ, ಹರೀಶ್, ನವೀನ್  ಸೇರಿದಂತೆ, ಇತರರು ಹಾಜರಿದ್ದರು.

error: Content is protected !!