ಹರಿಹರ, ಫೆ. 23- ನಗರದ ಹೊಸ ಭರಂಪುರ ಬಡಾವಣೆಯ ಶ್ರೀ ಚೌಡೇಶ್ವರಿ ದೇವಸ್ಥಾನದ ಗೋಪುರ ಕಟ್ಟಡ ನಿರ್ಮಾಣ ಕಾಮಗಾರಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುರೇಶ್ ಚಂದಪೂರ್ ಮಾತನಾಡಿ, ಶ್ರೀ ಚೌಡೇಶ್ವರಿ ದೇವಸ್ಥಾನದ ಗೋಪುರ ನಿರ್ಮಾಣ ಕಾರ್ಯವನ್ನು ಬಹಳ ದಿನಗಳ ಕೆಳಗೆ ಆರಂಭ ಮಾಡಬೇಕೆಂದು ತೀರ್ಮಾನ ಮಾಡಲಾಗಿತ್ತು. ಆದರೆ, ಹಲವಾರು ಅಡೆತಡೆಗಳು ಬಂದಿದ್ದರಿಂದ ಸ್ವಲ್ಪ ದಿನಗಳ ಕಾಲ ತಡವಾಯಿತು. ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಚೌಡೇಶ್ವರಿ ಅಮ್ಮನವರ ದೇವಸ್ಥಾನ ಗೋಪುರ ನಿರ್ಮಾಣ ಮಾಡಲು ಈಗಾಗಲೇ ತೀರ್ಮಾನ ಮಾಡಿ ಇಂದು ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇವಣಪ್ಪ ದ್ಯಾವನೇಕರ, ಚೂರಿ ಜಗದೀಶ್, ನಾಗೇನಹಳ್ಳಿ ಹನುಮಂತಪ್ಪ, ರವಿಕುಮಾರ್, ರಾಮು ಯಕ್ಕನಹಳ್ಳಿ, ಊರಮ್ಮ ದೇವಸ್ಥಾನದ ಧರ್ಮದರ್ಶಿ ಎಂ.ಚಿದಾನಂದ ಕಂಚಿಕೇರಿ, ಸಿಂಗಾಡಿ ಸಿದ್ದಪ್ಪ, ಬಸವರಾಜ್ ಸಿಂಗಾಡಿ, ಕೃಷ್ಣಪ್ಪ, ಶಿವಪುತ್ರಪ್ಪ, ಮಹಾರುದ್ರಪ್ಪ ಹಾವನೂರು, ಚಂದ್ರಪ್ಪ ಕೊಂಡಜ್ಜಿ, ಮಂಜುನಾಥ್ ದಾಸರ, ಕಾಗದವರ ಕುಮಾರ್, ಹಾವನೂರು ವೀರೇಶ್, ದೇವರಾಜ್ ದ್ಯಾವನೇಕರ ಇತರರು ಹಾಜರಿದ್ದರು.