ಮಹಾದೇವಪ್ಪ ಶಾಲೆಗೆ ತಟ್ಟೆ ಕೊಡುಗೆ

ಮಹಾದೇವಪ್ಪ ಶಾಲೆಗೆ ತಟ್ಟೆ ಕೊಡುಗೆ

ದಾವಣಗೆರೆ, ಫೆ. 22 – ನಗರದ ಸಿದ್ಧವೀರಪ್ಪ ಬಡಾವಣೆಯ ಸಾಧನಾ ಮಹಿಳಾ ಸಂಘದ ವತಿಯಿಂದ ಹಳ್ಳಿ ಮಹಾದೇವಪ್ಪ ಶಾಲೆಯ ಮಕ್ಕಳಿಗೆ ಬಿಸಿ ಊಟಕ್ಕಾಗಿ 25 ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾಧನಾ ಮಹಿಳಾ ಸಂಘದ ಅಧ್ಯಕ್ಷರಾದ ಗೀತಮ್ಮ ಷಣ್ಮುಖಯ್ಯ, ಗೌರವಾಧ್ಯಕ್ಷರಾದ ಶಶಿಕಲಾ ಈಶ್ವರಪ್ಪ, ಕಾರ್ಯದರ್ಶಿ ಮಂಗಳಾ ಸಿ.ದೊಡ್ಡಮನಿ, ಖಜಾಂಚಿ ಮಮತ ರವೀಂದ್ರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

error: Content is protected !!