ಹರಿಹರ, ಫೆ.21- ನಾಳೆ ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಶಾಲೆಯ ಹತ್ತಿರವಿರುವ ಕಾಳಿದಾಸ ನಗರದಲ್ಲಿ ಶ್ರೀ ವರಸಿದ್ಧಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೈ.ಕೃಷ್ಣಮೂರ್ತಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ದಿನಾಂಕ 22ರ ಗುರುವಾರ ಬೆಳಗ್ಗೆ 8.36 ಕ್ಕೆ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಪ್ರತಿಷ್ಠಾಪನೆಯ ಅಂಗವಾಗಿ ಅಭಿಷೇಕ ಮತ್ತು ಮಹಾ ಮಂಗಳಾರತಿ ತೀರ್ಥ-ಪ್ರಸಾದ ವಿನಿಯೋಗವಿರುತ್ತದೆ ಎಂದರು. ಸರ್ಕಾರದ ಯಾವುದೇ ಅನುದಾನವಿಲ್ಲದೇ ನಿರ್ಮಾಣವಾದ ದೇವಸ್ಥಾನ 30’x40′ ಅಳತೆ ಭೂಮಿಯನ್ನು ಹೆಚ್.ಲಿಂಗುರಾವ್, ಗಣಪತಿರಾವ್ ಸಹೋದರರು ಮತ್ತು ಕೊಟ್ರಮ್ಮ ಹಾದಿಮನಿ ಇವರು ದಾನವಾಗಿ ನೀಡಿದ್ದು, ದೇವಸ್ಥಾನದ ಕಟ್ಟಡ ಇತರೆ 20 ಲಕ್ಷ ರೂ. ಖರ್ಚಾಗಿದೆ. ಸಾರ್ವಜನಿಕರ, ಭಕ್ತರ ಹಾಗೂ ಸದಸ್ಯರುಗಳ ದೇಣಿಗೆ ಮಾತ್ರದಿಂದಲೇ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಪಿ.ಮೋಹನ್, ವೆಂಕಟೇಶ್, ನಾಗರಾಜ್, ಸಂತೋಷ್, ಸುನೀಲ್, ಮಂಜುನಾಥ ನಾಯಕ್ ಮುಂತಾದವರು ಉಪಸ್ಥಿತರಿದ್ದರು.